ಪುತ್ತೂರು: ಶ್ರೀ ಪ್ರಗತಿ ವಿಸ್ತಾರ ಕಾಲೇಜು ಫಾರ್ ಏವಿಯೇಶನ್ ಅಂಡ್ ಮ್ಯಾನೇಜ್ಮೆಂಟ್ ವತಿಯಿಂದ ಪ್ರಗತಿ ವಿಸ್ತಾರ ನ್ಯಾಷನಲ್ & ಇಂಟರ್ ನ್ಯಾಷನಲ್ ಏವಿಯೇಶನ್ ಅವಾರ್ನೆಸ್ ಡ್ರೈವ್ ಕಾರ್ಯಕ್ರಮವು ಡಿ.13ನೇ ಶನಿವಾರದಂದು ನಡೆಯಲಿದೆ.
ಈ ವಿಶೇಷ ಕಾರ್ಯಕ್ರಮ “Ventara – Wings of Progress Initiative” ಎಂಬ ಹೆಸರಿನಲ್ಲಿ ಶ್ರೀ ಪ್ರಗತಿ ವಿಸ್ತಾರ ಕಾಲೇಜು ಆವರಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಪಾಲಿಟೆಕ್ನಿಕ್ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ವಿಮಾನಯಾನ ಕ್ಷೇತ್ರದ ಪರಿಚಯ, ಉದ್ಯೋಗಾವಕಾಶಗಳು ಮತ್ತು ಕೈಗಾರಿಕಾ ಜ್ಞಾನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ವಿಮಾನಯಾನ ಕೈಗಾರಿಕೆಯ ನಿರೀಕ್ಷೆಗಳು ಹಾಗೂ ಸಾಫ್ಟ್ ಸ್ಕಿಲ್ಸ್, ಕ್ಯಾಬಿನ್ ಕ್ರ್ಯೂ ವೃತ್ತಿ ಅವಕಾಶಗಳು,ಹಿಂದೂಸ್ಥಾನ್ ಎರೋನಾಟಿಕಲ್ ನಲ್ಲಿ ಉದ್ಯೋಗಾವಕಾಶಗಳು, ಏರೋಸ್ಪೇಸ್ ಕಾಂಪೊಸಿಟ್ ಟೆಕ್ನಿಷಿಯನ್, ಏರೋಸ್ಪೇಸ್ CNC ಮೆಷಿನಿಸ್ಟ್ ವೃತ್ತಿ, ವಿಮಾನ ನಿಲ್ದಾಣ ನಿರ್ವಹಣೆ ಹಾಗೂ ಭದ್ರತಾ ಮಾಹಿತಿ ಮತ್ತು ವೃತ್ತಿಪರ ಸಂವಹನ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಾಗಿವುದು. ವಿಮಾನಯಾನ ಕ್ಷೇತ್ರದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ, 17 ವರ್ಷಗಳ ಸ್ಪೈಸ್ಜೆಟ್ ಕ್ಯಾಬಿನ್ ಕ್ರ್ಯೂ ಅನುಭವವಿರುವ ಬಿಂದುಸಾಗರ್ ಶೆಟ್ಟಿ (ಮುಂಬೈ, ದೆಹಲಿ, ಬೆಂಗಳೂರು), 2 ವರ್ಷದ ಏರ್ ಇಂಡಿಯಾ SATS ಬೆಂಗಳೂರಿನ ಗ್ರೌಂಡ್ ಆಪರೇಶನ್ ಅನುಭವವಿರುವ ಕುಮಾರಿ ಚೈತನ್ಯ, ಹಾಗೂ ಏರ್ ಇಂಡಿಯಾ SATS ಮಂಗಳೂರಿನಲ್ಲಿ 1 ವರ್ಷದ ಗ್ರೌಂಡ್ ಆಪರೇಶನ್ ಅನುಭವ ಹೊಂದಿರುವ ಕುಮಾರಿ ಅಶ್ವಿತಾ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ವಿಮಾನಯಾನಕ್ಕೆ ಸಂಬಂಧಪಟ್ಟಂತೆ 1 ವರ್ಷದ ಇಂಟರ್ನ್ಯಾಷನಲ್ ಡಿಪ್ಲೊಮಾ ಇನ್ ಏರ್ಲೈನ್ & ಏರ್ಪೋರ್ಟ್ ಆಪರೇಷನ್ಸ್, 2 ವರ್ಷದ ಕಾಂಪ್ರಿಹೆನ್ಸಿವ್ ಕೋರ್ಸ್ ಇನ್ ಏರ್ಲೈನ್ ಸರ್ವೀಸ್ & ಸೇಫ್ಟಿ ಆಪರೇಷನ್ಸ್, 3 ವರ್ಷದ BBA ಇನ್ ಏವಿಯೇಶನ್ ಮ್ಯಾನೇಜ್ಮೆಂಟ್, B.Voc ಇನ್ ಏವಿಯೇಶನ್ ಸೇರಿದಂತೆ Certificate ಕೋರ್ಸ್ ಗಳಾದ ಏರ್ಲೈನ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ ಮತ್ತು ಏರ್ಪೋರ್ಟ್ ಟರ್ಮಿನಲ್ ಆಪರೇಷನ್ ಎಕ್ಸಿಕ್ಯೂಟಿವ್ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಮ್ಯಾನೇಜ್ಮೆಂಟ್ ನಲ್ಲಿ ಲಭ್ಯವಿದ್ದು, ಆಸಕ್ತರು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಸಂಸ್ಥೆಯನ್ನು 9148516884 / 9448536143 ಸಂಖ್ಯೆಗೆ ಕರೆ ಅಥವಾ ಕಛೇರಿಗೆ ನೇರವಾಗಿ ಭೇಟಿ ನೀಡುವ ಮೂಲಕ ಸಂಪರ್ಕಿಸಬಹುದಾಗಿದೆ.