




ಪುತ್ತೂರು: ಇದು ಅಂತಿಂಥ ಹೊಟೇಲ್ ಅಲ್ಲ. ಇಲ್ಲಿ ಎಲ್ಲವೂ ವಿಭಿನ್ನ. ದೊಡ್ಡ ದೊಡ್ಡ ನಗರಗಳಲ್ಲಿರುವಂತೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪರೂಪವಾಗಿ ಕಾಣಸಿಗುವ ವಿನೂತನ ಶೈಲಿಯ ಹೊಟೇಲ್ ಇದೀಗ ಪುತ್ತೂರಿನಲ್ಲಿ ಗ್ರಾಹಕರ ಸೇವೆಗೆ ಸಿದ್ದಗೊಂಡಿದ್ದು ಡಿ.12ರಂದು ಶುಭಾರಂಭಗೊಳ್ಳಲಿದೆ.



ಈ ರೀತಿಯ ಹೊಟೇಲ್ನ್ನು ಪುತ್ತೂರಿನಲ್ಲಿ ನೀವು ಹಿಂದೆಂದೂ ಕಂಡಿರಲು ಸಾಧ್ಯವಿಲ್ಲ.ಪುತ್ತೂರು ಮೂಲಕ ಹಾದುಹೋಗುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಬೊಳುವಾರು ಮಂಜಲ್ಪಡ್ಪು ಸಮೀಪ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಹೊಟೇಲ್ ಪುತ್ತೂರಿನ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಬರೆದಿದೆ. ಬಹಳಷ್ಟು ಆಕರ್ಷಣೀಯವಾಗಿ ನಿರ್ಮಾಣಗೊಂಡಿರುವ ಈ ಹೊಟೇಲ್ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.






ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಹೊಟೇಲ್ ಸುಮಾರು 5೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನೆಲ ಅಂತಸ್ತಿನ ಕಟ್ಟಡವಿದೆ. ಆಕರ್ಷಕ ಗಾರ್ಡನ್, ಮುಕ್ಕಾಲು ಎಕರೆ ಜಾಗದಲ್ಲಿ ವಿಶಾಲವಾದ ವಾಹನ್ ಪಾರ್ಕಿಂಗ್ ಸೌಲಭ್ಯ, ಎಸಿ, ನಾನ್ ಎಸಿ ಪ್ರತ್ಯೇಕ ಕೊಠಡಿಗಳನ್ನು ಹೊಂದಿದೆ. ಎಸಿ ಕೊಠಡಿಯೊಳಗೆ 45 ಮಂದಿ ಹಾಗೂ ನಾನ್ ಎಸಿ ಕೊಠಡಿಯೊಳಗೆ 60 ಮಂದಿ ಏಕ ಕಾಲದಲ್ಲಿ ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಅಡುಗೆ ಕೊಠಡಿ, ಸ್ಟಾರ್ ಹೊಟೇಲ್ಗಳಲ್ಲಿ ಅಡುಗೆ ಮಾಡಿದ ಅನುಭವ ಹೊಂದಿರುವ ನುರಿತ ಪಾಕ ತಜ್ಞರಿಂದ ತಯಾರಾಗುವ ಶುಚಿ ಹಾಗೂ ರುಚಿಯಾದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಖಾದ್ಯಗಳನ್ನು ಸವಿಯಬಹುದು. ಅಲ್ಲದೆ ಅನುಭವಿ ಸಿಬ್ಬಂದಿಗಳ ತಂಡವನ್ನೇ ಹೊಂದಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10.30ರ ತನಕ ಗ್ರಾಹಕರ ಸೇವೆ ಸಿದ್ದಗೊಂಡಿದೆ.
ಇದರ ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಹನದಲ್ಲಿ ಕುಳಿತಲ್ಲಿಗೆ ಉಪಾಹಾರಗಳ ಸರ್ವೀಸ್ ನೀಡಲಾಗುವುದು. ವಿಶಾಲವಾದ ಗಾರ್ಡನ್ ಹೊಂದಿದ್ದು ಸಂಜೆ ವೇಳೆಗೆ ಕುಟುಂಬಸ್ಥರೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಉಪಾಹಾರಗಳನ್ನು ಸವಿಯಬಹುದು. ಆಕರ್ಷಕ ಜಲಪಾತ ನಿರ್ಮಿಸಲಾಗಿದ್ದು ಖಾದ್ಯಗಳನ್ನು ಸವಿದು ಸೆಲ್ಪೀ ಫೋಟೋ ತೆಗೆದುಕೊಳ್ಳಬಹುದು. ಗಾರ್ಡನ್ ಸುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಾ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ.
ಓಪನ್ ಏರ್ ಥಿಯೇಟರ್; ಹೋಟೆಲ್ನ ಜೊತೆಗೆ ಶುಭ, ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಏಪನ್ ಏರ್ ಥಿಯೇಟರ್ ಹಾಲ್ ಹೊಂದಿದೆ. ಆಕರ್ಷಣೀಯವಾದ ಗಾರ್ಡನ್ ಹಾಲ್ ಇದಾಗಿದ್ದು ಸುಮಾರು 300 ಮಂದಿ ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದೆ. ಅಲ್ಲದೆ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಸೌಲಭ್ಯವನ್ನು ಹೊಂದಿದೆ.
ಮುಂದಿನ ಯೋಜನಗೆಳು: ಸಂಸ್ಥೆಯ ಮುಖಾಂತರ ಪ್ರವಾಸಿಗರಿಗೆ ಅನುಕೂಲವಾಗುವಂತೆ ಲಾಡ್ಜಿಂಗ್ ಸೌಲಭ್ಯ ಹಾಗೂ ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತ ಒಳಾಂಗಣ ಸಭಾಂಗಣವನ್ನು ನಿರ್ಮಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.







