ರೆಂಜಲಾಡಿ ಮಸೀದಿಯ ಮುಅಲ್ಲಿಂಗೆ ಜಮಾಅತ್ ಸದಸ್ಯನಿಂದ ಹೋಂಡಾ ಆಕ್ಟಿವಾ ಉಡುಗೊರೆ

0

ಪುತ್ತೂರು: ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು 25 ವರ್ಷಗಳಿಂದ ಮುಅಲ್ಲಿಂ ಆಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ರೆಂಜಲಾಡಿ ಆದರ್ಶ ಸೇವಾ ಸಂಘದ ಅಧ್ಯಕ್ಷ, ಮಲ್ನಾಡ್ ಲೈಮ್ ಇಂಡಸ್ಟ್ರೀಸ್‌ನ ಮಾಲಕರಾದ ಇಮ್ರಾನ್ ಮಲ್ನಾಡ್ ಅವರು ಸುಮಾರು 1 ಲಕ್ಷದ 15 ಸಾವಿರ ರೂ ವೆಚ್ಚದ ಹೋಂಡಾ ಆಕ್ಟಿವಾವನ್ನು ಉಡುಗೊರೆ ರೂಪದಲ್ಲಿ ಕೊಡುಗೆಯಾಗಿ ನೀಡಿದರು.

ಆಕ್ಟಿವಾ ಹೋಂಡಾವನ್ನು ಅಬೂಬಕ್ಕರ್ ಮುಸ್ಲಿಯಾರ್ ಅವರು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೆಂಜಲಾಡಿ ಮಸೀದಿಯ ಖತೀಬ್ ನಾಸಿರ್ ಫೈಝಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here