ವಿಟ್ಲ: ಮನೆ ಬಳಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಉರಿಮಜಲು ಎಂಬಲ್ಲಿ ನಡೆದಿದೆ.
ಉರಿಮಜಲು ನಿವಾಸಿ ಗಣೇಶ್ ಎಂಬವರು ತಮ್ಮ ಮನೆಯ ಬಳಿ ನಿಂತಿದ್ದ ವೇಳೆ ಅಲ್ಲೇ ನಿಂತಿದ್ದ ಸ್ಥಳೀಯ ನಿವಾಸಿ ಇರ್ಷಾದ್‌ರವರಲ್ಲಿ ಏನು ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಗಣೇಶ್ ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದೆ. ಗಲಾಟೆ ಕೇಳಿ ಮನೆಯಿಂದ ಹೊರಬಂದ ಗಣೇಶ್‌ರವರ ಪತ್ನಿ ಗಲಾಟೆಯನ್ನು ತಡೆದು ಗಾಯಗೊಂಡ ಗಣೇಶ್ ರವರನ್ನು ಚಿಕಿತ್ಸೆಗಾಗಿ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
