ಡಿ.14: ರೆಂಜ ಒಕ್ಕೂಟದ ಸದಸ್ಯರ ವಾರ್ಷಿಕ ಕ್ರೀಡಾಕೂಟ- 2025

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪುತ್ತೂರು ಬೆಟ್ಟಂಪಾಡಿ ವಲಯದ ರೆಂಜ ಒಕ್ಕೂಟದ ಸರ್ವ ಸದಸ್ಯರ ಕ್ರೀಡಾಕೂಟ- 2025 ಕಾರ್ಯಕ್ರಮ ಡಿ.14ರಂದು ಬೆಳಿಗ್ಗೆ ಗಂಟೆ 10ಕ್ಕೆ ಇರ್ದೆ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಆವರಣದಲ್ಲಿ ನಡೆಯಲಿದೆ.

 ದ.ಕ.ಜಿಲ್ಲಾ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಕ್ರೀಡಾಕೂಟ ಉದ್ಘಾಟಿಸಲಿರುವರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಅತಿಥಿಗಳಾಗಿ ಭಾಗವಹಿಸಲಿರುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೆಂಜ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ನಾಯ್ಕ.ಡಿ ವಹಿಸಲಿದ್ದು, ಯೋಜನೆಯ ತಾಲೂಕು ಯೊಜನಾಧಿಕಾರಿ ಶಶಿಧರ್ ಎಂ, ಇರ್ದೆ ಬೆಟ್ಟಂಪಾಡಿ ಸೇವಾ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ.ಪಿ, ಬೆಟ್ಟಂಪಾಡಿ ದೇವಾಲಯದ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಯೋಜನೆಯ ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಕೆ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಕೋನಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here