ಪುತ್ತೂರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಕಡಬ ಸವಣೂರು ಗ್ರಾಮ ಪಂಚಾಯತ್ ನ ಶ್ರೀರಾಮ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟದಡಿಯಲ್ಲಿ ಪಾಲ್ತಾಡಿ ಗ್ರಾಮದ ಶ್ರೀದೇವಿ ವಾರ್ಡಿನಲ್ಲಿ ನಂದಾದೀಪ ಎಂಬ ನೂತನ ಸಂಜೀವಿನಿ ಸಂಘವನ್ನು ಸಂಘದ ಸದಸ್ಯರಾದ ಗುಲಾಬಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಅಧ್ಯಕ್ಷರಾಗಿ ನಯನ ಕುಮಾರಿ, ಹಾಗೂ ಕಾರ್ಯದರ್ಶಿಯಾಗಿ ಚೈತ್ರ ಬಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಪಾಲ್ತಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಕ್ಷ್ಮಿ ಸಂಘದ ನಡವಳಿ ಪುಸ್ತಕ ಹಸ್ತಾಂತರಿಸಿದರು.
ಶ್ರೀ ರಾಮ ಸಂಜೀವಿನಿ ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಾದ ಗೀತಾ ಜಿ ಎಸ್ ಸಂಜೀವಿನಿ ಯೋಜನೆಯ ಬಗ್ಗೆ ,ಗ್ರಾಮೀಣ ರೈತ ಸಂತೆ ಬಗ್ಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ವಿಮೆಯ ಬಗ್ಗೆ, ಕೃಷಿ ಇಲಾಖೆಯ ಮಾಹಿತಿ ಪಶು ಇಲಾಖೆ ಮಾಹಿತಿ ನೀಡಿ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.
ಒಕ್ಕೂಟದ ಎಲ್ ಸಿ ಆರ್ ಪಿ ರೇವತಿ ರವರು ಸ್ವಾಗತಿಸಿ, ಧನ್ಯವಾದಗೈದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ,ನೂತನ ಸಂಘದ ಸದಸ್ಯರಾದ ಪ್ರೇಮ, ದೇವಕಿ, ಮೋಹಿನಿ, ವಿನೋದಕ್ಷಿ, ರುಕ್ಮಿಣಿ, ಪ್ರಿಯಾ, ಗುಲಾಬಿ, ಹಾಜರಿದ್ದರು.
