ಮುಂಬೈ ಹೈಕೋರ್ಟು ನ್ಯಾಯವಾದಿ ಬೈಲಾಡಿ ಪಲ್ಲತ್ತಡ್ಕ ಪಿ ಟಿ ಗೌಡರಿಗೆ ಶ್ರದ್ದಾಂಜಲಿ

0

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದವರು – ಚಿದಾನಂದ ಬೈಲಾಡಿ
ಕರ್ತವ್ಯದಲ್ಲಿ ಶಿಸ್ತನ್ನು ಕಂಡೆ – ಕುಂಟಿಕಾನ ಲಕ್ಷ್ಮಣ ಗೌಡ
ವೃತ್ತಿಗೆ ಗೌರವ ನೀಡುವವರು – ಡಾ. ಕಲ್ಪನಾ

ಪುತ್ತೂರು: ಪ್ರತಿಷ್ಠಿತ ಬೈಲಾಡಿ ಮನೆತನದ ಕೆಯ್ಯೂರು ಗ್ರಾಮಾದ ಪಲ್ಲತ್ತಡ್ಕ ನಿವಾಸಿ ಮುಂಬೈ ಹೈಕೋರ್ಟು ನ್ಯಾಯವಾದಿ ಪಿ ತಿಮ್ಮಪ್ಪ ಗೌಡ ( ಪಿ.ಟಿ ಗೌಡ) ಅವರ ಉತ್ತರಕ್ರಿಯೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಡಿ.19ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದವರು:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬೈಲಾಡಿ ಕುಟುಂಬದ ಪ್ರಮುಖರಾಗಿರುವ ಚಿದಾನಂದ ಬೈಲಾಡಿ ಅವರು ನುಡಿನಮನ ಸಲ್ಲಿಸಿದರು. ಒಬ್ಬ ವ್ಯಕ್ತಿ ಬದುಕಿದಷ್ಟು ವರ್ಷ ಹೇಗೆ ಬದುಕಿದ್ದಾನೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಬೈಲಾಡಿ ಪಿ.ಟಿ.ಗೌಡ ಅವರು ಮಾದರಿ. ಅವರು ನನಗೆ ಚಿಕ್ಕಪ್ಪನಾದರೂ ನಾನು ಅವರನ್ನು ಅಣ್ಣ ಎಂದು ಕರೆದರೂ ಆಪ್ತ ಸ್ನೇಹಿತನಾಗಿ ಅವರನ್ನು ಕೊಂಡಿದ್ದೇನೆ. ಅವರು ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಿದ್ದಾರೆ ಎಂದು ಹೇಳಿದರು. ಅವರು ಬೈಲಾಡಿ ತರವಾಡು ಮನೆಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ತನ್ನಿಂದೇನಾಗಬೇಕೆಂದು ಕೇಳಿದವರು. ಅವರ ಬೈಲಾಡಿ ಟ್ರಸ್ಟ್ ಮಾಡುವ ಗುರಿ ಯಶಸ್ವಿಯಾದರೂ ಅವರ ಕನಸಿನಂತೆ ಟ್ರಸ್ಟ್‌ಗೆ ನಿಧಿ ಮಾಡಲು ಅಸಾಧ್ಯವಾಗಿತ್ತು. ಆದರೆ ಅದನ್ನು ಮುಂದಿನ ದಿನ ನಾವು ಮಾಡುತ್ತೇವೆ ಎಂದರು.


ಕರ್ತವ್ಯದಲ್ಲಿ ಶಿಸ್ತನ್ನು ಕಂಡೆ:
ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಕುಂಟಿಕಾನ ಲಕ್ಷ್ಮಣ ಗೌಡ ಅವರು ಮಾತನಾಡಿ ತಿಮ್ಮಪ್ಪ ಗೌಡರು ಬಾಂಬೆಯಲ್ಲಿ ಆರಂಭದಲ್ಲಿ ಮುಂಬೈ ಬೋರಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿ ಮ್ಯಾನೇಜರ್ ಆಗಿದ್ದರು. ಅವರಲ್ಲಿರುವ ಕರ್ತವ್ಯ ನಿಷ್ಠೆ ಅವರನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಿಸಿದೆ. ಅವರು ಹೈಕೋರ್ಟ್ ವಕೀಲರಾದಾಗ ನಮಗೂ ಹೆಮ್ಮೆ ಆಗಿತ್ತು ಎಂದರು.


ವೃತ್ತಿಗೆ ಗೌರವ ನೀಡುವವರು:
ತಿಮ್ಮಪ್ಪ ಗೌಡರ ಸಂಬಂಧಿಕೆ ಡಾ.ಕಲ್ಪನಾ ಶ್ರೀಧರ್ ಮುರುಳ್ಯ ಅವರು ಮಾತನಾಡಿ ದೈವ ಭಕ್ತರಾದ ತಿಮ್ಮಪ್ಪ ಗೌಡ ಅವರು ವೃತ್ತಿ ಗೌರವ ನೀಡುವವರು. ಅವರು ವೃತ್ತಿ ಜೀವನದಲ್ಲಿ ರಜೆ ಮಾಡುತ್ತಿರಲಿಲ್ಲ ಎಂದ ಅವರು ಅವರ ಸಮಾಜಮುಖಿ ಕೆಲಸವನ್ನು ನೆನಪಿಸಿದರು. ಈ ಸಂದರ್ಭ ತಿಮ್ಮಪ್ಪ ಗೌಡ ಅವರ ಪತ್ನಿ ಕವಿತಾ, ಪುತ್ರಿಯರಾದ ಲಹರಿ ಮತ್ತು ಕ್ಷಿತಿಜ, ಅಳಿಯ ಶಂಕರ್, ಸಹೋದರರಾದ ವಿಶ್ವನಾಥ ಗೌಡ, ಜನಾರ್ದನ ಗೌಡ, ಮೊಮ್ಮಗಳು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು ಮತ್ತು ಪದಾಧಿಕಾರಿಗಳು, ಹಾಗು ಸಂಬಂಧಿಕರು ಉಪಸ್ಥಿತರಿದ್ದರು.

ಕೆಲಸದೊಂದಿಗೆ ಕಾನೂನು ಶಿಕ್ಷಣ
ಪಿ ತಿಮ್ಮಪ್ಪ ಗೌಡ ಅವರು ಎಳೆಯ ಪ್ರಾಯದಲ್ಲಿ ಕೆಲಸದ ನಿಮಿತ್ತ ಮುಂಬೈಗೆ ಹೋಗಿ, ಮುಂಬೈ ಬೋರಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದು, ನಂತರ ಕಾನೂನು ಪದವಿಯನ್ನು ಅಲ್ಲಿಯೇ ಪಡೆದು, ತದ ನಂತರ ಮುಂಬೈ ಹೈಕೋರ್ಟುನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಅವರೊಬ್ಬ ಛಲವಾದಿ ಸಾಧಕ.
ಚಿದಾನಂದ ಬೈಲಾಡಿ

LEAVE A REPLY

Please enter your comment!
Please enter your name here