ಬಡಗನ್ನೂರು: ಅರಿಯಡ್ಕ ವಲಯದ ಭಜನೋತ್ಸವ ಮತ್ತು ಬಡಗನ್ನೂರು ʼಎʼಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ

0

ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಪುತ್ತೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವಿ.ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಅರಿಯಡ್ಕ ವಲಯದ ಭಜನೋತ್ಸವ ಕಾರ್ಯಕ್ರಮವು ಜ.12ರಂದು ಬಡಗನ್ನೂರು ಸಮೀಪದ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಗಳು ಹಾಗೂ ತಂಡಗಳು ಭಾಗವಹಿಸಿ ಭಜನಾ ಸೇವೆ ಸಲ್ಲಿಸಿದವು. ಸರ್ವಶಕ್ತಿ ಭಜನಾ ಸಂಘ ಪಡುಮಲೆ, ಮಹಾಲಕ್ಷ್ಮೀ ಭಜನಾ ಮಂಡಳಿ ಸುಳ್ಯಪದವು, ಮಹಾಲಕ್ಷ್ಮೀ ಮಕ್ಕಳ ಭಜನಾ ಮಂಡಳಿ ಸುಳ್ಯಪದವು, ಅಯ್ಯಪ್ಪ ಭಜನಾ ಸಂಘ ಶಕ್ತಿನಗರ ಗಾಳಿಮುಖ, ಆದಿಶಕ್ತಿ ಮಹಿಳಾ ಭಜನಾ ಸಂಘ ಪಟ್ಟೆ ಬಡಗನ್ನೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಉಜಿರ್ಗೂಳಿ ಅಮ್ಮಚಿನಡ್ಕ, ಸರ್ವೋದಯ ಭಜನಾ ತಂಡ ಸುಳ್ಯಪದವು, ಸರ್ವೋದಯ ಮಕ್ಕಳ ಭಜನಾ ತಂಡ ಸುಳ್ಯಪದವು, ಶ್ರೀ ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಮಾಣಿಯಡ್ಕ ಕಾವು, ಶ್ರೀ ವಿಷ್ಣು ಮಹಿಳಾ ಕುಣಿತ ಭಜನಾ ಮಂಡಳಿ ಪಟ್ಟೆ, ವನಿತಾ ಭಜನಾ ಮಂಡಳಿ ಸುಳ್ಯಪದವು, ವನಿತಾ ಕುಣಿತ ಭಜನಾ ಮಂಡಳಿ ಸುಳ್ಯಪದವು ಹಾಗೂ ಶ್ರೀ ಪಂಚಲೀಂಗೇಶ್ವರ ಭಜನಾ ಮಂಡಳಿ ಈಶ್ವರಮಂಗಲ ತಂಡದ ಸದಸ್ಯರು ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಅರಿಯಡ್ಕ ವಲಯ ಭಜನಾ ಪರಿಷತ್ ಅಧ್ಯಕ್ಷ ಗಂಗಾಧರ ರೈ ಎಂ.ಜಿ., ಎಸ್‌ಕೆಡಿಆರ್‌ಡಿಪಿ ದ.ಕ.–2 ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ, ಅರಿಯಡ್ಕ ವಲಯ ಅಧ್ಯಕ್ಷ ದಿನೇಶ್ ರೈ ಕುತ್ಯಾಳ, ಪಡುಮಲೆ–ಪುತ್ತೂರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ ಯು., ಶ್ರೀ ಕ್ಷೇತ್ರ ಧರ್ಮಸ್ಥಳ ದ.ಕ. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ಪುತ್ತೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲೋಕೇಶ್ ಬೆತ್ತೋಡಿ, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಪ್ರಗತಿಪರ ಕೃಷಿಕ ಜಯಂತ ರೈ ಕುದ್ಯಾಡಿ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು, ಅರಿಯಡ್ಕ ವಲಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿಕ್ರಂ ರೈ ಸಾಂತ್ಯ, ನಿಕಟಪೂರ್ವ ಅಧ್ಯಕ್ಷ ನಾರಾಯಣ ರೈ ಕುದ್ಯಾಡಿ, ಬಡಗನ್ನೂರು ʼಎʼ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಹಾಗೂ ವಲಯ ಮೇಲ್ವಿಚಾರಕ ಹರೀಶ್ ಕುಲಾಲ್ ಉಪಸ್ಥಿತರಿದ್ದರು.


ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ಧನ ಪೂಜಾರಿ, ಪುರಂದರ ರೈ ಕುದ್ಕಾಡಿ, ಶಂಕರಿ ಪಟ್ಟೆ, ಶ್ರೀನಿವಾಸ್ ಗೌಡ ಕನ್ನಯ, ಗೋಪಾಲ ನಾಯ್ಕ, ಉದಯಕುಮಾರ್ ಪಡುಮಲೆ, ಶ್ರೀಮತಿ ಕನ್ನಡ್ಕ ಸೇರಿದಂತೆ ವಿವಿಧ ಒಕ್ಕೂಟಗಳ ಅಧ್ಯಕ್ಷರು, ಸದಸ್ಯರು, ಸೇವಾ ಪ್ರತಿನಿಧಿಗಳು ಹಾಗೂ ಊರಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here