







ಪುತ್ತೂರು: ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ತಂಡ ಕಾರ್ಯಾಚರಣೆ ನಡೆಸಿ ವಿವಿಧ ಕಾಡು ಜಾತಿಯ ಮರಗಳನ್ನು ಕಡಿದು ಕಟ್ಟಿಗೆಯನ್ನಾಗಿ ಪರಿವರ್ತಿಸಿ ದಾಸ್ತಾನು ಇರಿಸಿರುವುದನ್ನು ಕಣಿಯೂರಿನಲ್ಲಿ ಪತ್ತೆ ಹಚ್ಚಿ ಈರ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.



ಮಂಗಳೂರು ವಿಭಾಗದ ಉಪ್ಪಿನಂಗಡಿ ವಲಯದ ಕಣಿಯೂರು ಶಾಖೆಯ ಕಣಿಯೂರು ಗಸ್ತು ವ್ಯಾಪ್ತಿಯ ಕಣಿಯೂರು ಗ್ರಾಮದ ಮಲೆಂಗಲ್ ಮೀಸಲು ಅರಣ್ಯದ ಒಳಗಡೆ ವಿವಿಧ ಕಾಡುಜಾತಿಯ ಮರಗಳನ್ನು ಕಡಿದು ಕಟ್ಟಿಗೆಯನ್ನಾಗಿ ಪರಿವರ್ತಿಸಿ ದಾಸ್ತಾನು ಇರಿಸಿರುವುದನ್ನು ಪತ್ತೆ ಮಾಡಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದ ತಂಡ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 24(ಸಿ) ಮತ್ತು 80ರನ್ವಯ ಮಂಗಳೂರು ಕುಲಶೇಖರದ ಸದಾನಂದ ಮೇಲಾಂಟ ಮತ್ತು ಕಣಿಯೂರು ಮಲೆಂಗಲ್‌ನ ದಿನೇಶ್ ಶೆಟ್ಟಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.













