






ಕೆಯ್ಯೂರು: ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ (ರಿ) ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ 5 ಕ್ರಿಕೆಟ್ ಪಂದ್ಯಾಟ ಜ25 ,26 ವರೆಗೆ ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಹಿರಿಯ ಪ್ರಗತಿಪರ ಕೃಷಿಕ ಕೊರಗಪ್ಪ ರೈ ಸಣಂಗಳ ಉದ್ಘಾಟಿಸಿಲಿದ್ದಾರೆ.






ದೀಪ ಪ್ರಜ್ವಲನೆಯನ್ನು ಮಾಜಿ ಅಧ್ಯಕ್ಷರು ಶ್ರೀ ದುರ್ಗಾ ಯುವಕ ಮಂಡಲ ಕೆಯ್ಯೂರು ಎ.ಕೆ ಚಂದ್ರಹಾಸ ರೈ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಪುತ್ತೂರು ಕೃಷ್ಣ ಪ್ರಸಾದ್ ರೈ ಕಣಿಯಾರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ. ಸದಸ್ಯ ಬಟ್ಯಪ್ಪ ರೈ ದೇರ್ಲ, ತಾರನಾಥ ಪೂಜಾರಿ ಕಂಪ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲರು ಹಸೀನಾ ಬಾನು ಎಸ್.ಇ, ಎಸ್ ಡಿ ಎಂ ಸಿ ಕೆ ಪಿ ಎಸ್ ಕೆಯ್ಯೂರು ಉಪಾಧ್ಯಕ್ಷ ಆಯೂಬು, ಪೊಲೀಸ್ ಇಲಾಖೆ ನಾಗರಾಜ ಕೆ, ಕಣಿಯಾರು, ಕೆದಂಬಾಡಿ ಸಿ ಎ ಬ್ಯಾಂಕ್ ನಿರ್ದೇಶಕ ಪ್ರವೀಣ್ ಕಣಿಯಾರು, ಅರಣ್ಯ ಇಲಾಖೆ ದೇವಿ ಪ್ರಸಾದ್ ಸಣಂಗಳ, ಪ್ರಗತಿಪರ ಕೃಷಿಕ ಪದ್ಮ ಪ್ರಸಾದ್ ರೈ ಕಲಾಯಿ, ವಕೀಲ ಪುತ್ತೂರು ಸುಂದರ ಪೂಜಾರಿ ಮಣಿಕ್ಕರ, ಯುವ ಉದ್ಯಮಿಗಳಾದ ಅಭಿಷೇಕ್ ರೈ ಚೆನ್ನಾವರ, ರವಿ ಕೈತಡ್ಕ, ಹಂಝ ನೂಜಿ, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅಧ್ಯಕ್ಷ ದೇವಣ್ಣ ನಾಯ್ಕ , ಪ್ರಗತಿಪರ ಕೃಷಿಕ ಆನಂದ ಗೌಡ ಕಣಿಯಾರು, ಅಶೋಕ್ ಜನರಲ್ ಸ್ಟೋರ್ ಕೆಯ್ಯೂರು ಮಾಲಕ ಅಶೋಕ ಬಿ, ಉಪಸ್ಥಿತರಿರುವರು.
ಜ.26ರಂದು ಸಮಾರೋಪ ಸಮಾರಂಭದಲ್ಲಿ ಸಭಾದ್ಯಕ್ಷತೆಯನ್ನು ಸಂಸ್ಥಾಪಕರು ವಿಜಯ ಸಾಮ್ರಾಟ್ ರಿ ಪುತ್ತೂರು ಸಹಜ್ ರೈ ಬಳಜ್ಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷರು ಎ ಕೆ ಜಯರಾಮ ರೈ ಕೆಯ್ಯೂರು, ಪುತ್ತೂರು ಮಹಾವೀರ ಆಸ್ಪತ್ರೆ ಡಾ. ಸಚಿನ್ ಶಂಕರ್ , ಕೆಪಿಎಸ್ ಕೆಯ್ಯೂರು, ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್, ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ, ನಿವೃತ್ತ ಬಿ ಎಸ್ ಎನ್ ಎಲ್ ಅಧಿಕಾರಿ ಬಾಲಕೃಷ್ಣ ರೈ ಮಾಡಾವು, ಸದಸ್ಯರು ವ್ಯವಸ್ಥಾಪನ ಸಮಿತಿ ಶ್ರೀ ಕ್ಷೇತ್ರ ಕೆಯ್ಯೂರು ಅಶೋಕ್ ರೈ ದೇರ್ಲ, ವಕೀಲರು ರಾಮಕೃಷ್ಣ ಭಟ್ ಮೆರ್ಲ, ನ್ಯೂ ಬ್ರದರ್ಸ್ ಪಾಲ್ತಾಡ್ ಗೌರವಾಧ್ಯಕ್ಷ ಸುನಿಲ್ ರೈ ಪಾಲ್ತಾಡ್, ಯುವ ಉದ್ಯಮಿಗಳಾದ ಅಕ್ಷಯ ರೈ ದಂಬೆಕಾನ , ಶಿಶಿರ್ ರೈ ಸಣಂಗಳ, ಯೋಗರಾಜ್ ದೇವಿನಗರ, ಶ್ರೀದೇವಿ ಹಾರ್ಡ್ವೇರ್ಸ್ ಕೆಯ್ಯೂರು ಮಾಲಕ ಚಂದ್ರಶೇಖರ್ ರೈ ಸಣಂಗಳ, ಅರಣ್ಯ ಇಲಾಖೆ ಸತೀಶ್ ಡಿಸೋಜ ಪಾಲ್ತಾಡ್, ಶ್ರೀ ದುರ್ಗಾ ಆಟೋ ಚಾಲಕ ಮಾಲಕರ ಸಂಘ ಕೆಯ್ಯೂರು ಅಧ್ಯಕ್ಷ ಅಶೋಕ ಕಟ್ಟತ್ತಾರು, ಪ್ರಗತಿಪರ ಕೃಷಿಕ ಚಂದ್ರಶೇಖರ್ ರೈ ಸಣಂಗಳ , ಮಾಜಿ ಅಧ್ಯಕ್ಷ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ರಘುನಾಥ ಪೂಜಾರಿ ಗೋಳ್ತಿಲ, ಶ್ರೀದೇವಿ ಇಂಡಸ್ಟ್ರೀಸ್ ಕೆಯ್ಯೂರು ದಿನೇಶ್ ಆಚಾರ್ ದೇವಿ ನಗರ, ರಿಂಗ್ ವರ್ಕ್ಸ್ ಕೆಯ್ಯೂರು ಉಮ್ಮರ್ ಕೆಯ್ಯೂರು, ಶ್ರೀ ಕೃಷ್ಣ ಡ್ರೈವಿಂಗ್ ಸ್ಕೂಲ್ ಕೆಯ್ಯೂರು ಅಮರನಾಥ ರೈ ನೂಜಿ ಉಪಸ್ಥಿತರಿರುವರು ಎಂದು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಾಕೇಶ್ ಬಲ್ಲಾಳ್ ಸಣಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









