ನೇರಳಕಟ್ಟೆಯಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆ – ಈಡೇರಿತು ಹಲವು ವರ್ಷಗಳ ಬೇಡಿಕೆ

0

ಪುತ್ತೂರು:ನೆಟ್ಲಮುಡ್ನೂರು ಹಾಗೂ ಅದರ ಸುತ್ತಮುತ್ತಲಿನ ಗ್ರಾಮಗಳ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಪ್ಯಾಸೆಂಜರ್ ರೈಲು ನಿಲುಗಡೆ ಬೇಡಿಕೆ ಇದೀಗ ಈಡೇರಿದೆ.ತಮ್ಮ ಕನಸು ನನಸಾದ ಸಂತಸ ಈ ಭಾಗದ ಜನತೆಯದ್ದಾಗಿದೆ.ದಿನನಿತ್ಯ ಉದ್ಯೋಗ, ಶಿಕ್ಷಣ, ಆರೋಗ್ಯ ಹಾಗೂ ವ್ಯಾಪಾರ ಉದ್ದೇಶಕ್ಕಾಗಿ ರೈಲನ್ನು ಅವಲಂಬಿಸಿದ್ದ ಸಾವಿರಾರು ಪ್ರಯಾಣಿಕರ ಮನವಿಗೆ ಸ್ಪಂದಿಸಿ ರೈಲು ನಿಲುಗಡೆಗೆ ಇದೀಗ ವ್ಯವಸ್ಥೆ ಕಲ್ಪಿಸಲಾಗಿದೆ.


ಈ ಮಹತ್ವದ ಬೇಡಿಕೆ ಕುರಿತು ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಗಂಭೀರವಾಗಿ ಪರಿಗಣಿಸಿ ರೈಲ್ವೇ ಇಲಾಖೆ,ಸಚಿವರೊಂದಿಗೆ ನಿರಂತರ ಸಂಯೋಜನೆ ನಡೆಸಿದ್ದರು.ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.ಇದರಿಂದಾಗಿ ಈ ಪ್ರದೇಶಕ್ಕೆ ಹೊಸ ಆಶಾಕಿರಣ ಮೂಡಿದೆ.ಗ್ರಾಮೀಣ ಪ್ರದೇಶದ ಜನರ ಧ್ವನಿಯನ್ನು ಕೇಂದ್ರದ ಮಟ್ಟಕ್ಕೆ ತಲುಪಿಸಿದ ಜನಪ್ರತಿನಿಧಿಗಳ ಕಾರ್ಯಕ್ಕೆ ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳ ತಾಂತ್ರಿಕ ಸಹಕಾರವೂ ಮಹತ್ವದ ಪಾತ್ರ ವಹಿಸಿದೆ.ರೈಲು ನಿಲುಗಡೆಗೆ ಅಗತ್ಯವಿರುವ ಸಮಯ ನಿಗದಿ,ಭದ್ರತೆ ಹಾಗೂ ಕಾರ್ಯಾಚರಣಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸುವ ಮೂಲಕ ಇಲಾಖೆ ಜನರ ವಿಶ್ವಾಸವನ್ನುಗಳಿಸಿದೆ.

LEAVE A REPLY

Please enter your comment!
Please enter your name here