ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನ

0

ಪುತ್ತೂರು: 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಜ. 24 ರಂದು ನಡೆಯಿತು. ಹಲವು ವಿಶೇಷಗಳಲ್ಲಿ ಜಾಗತಿಕವಾಗಿ ಜೇನು ಗಡ್ಡ ದಾರಿ, ಜೇನು ಕೃಷಿ ವಿಶಿಷ್ಟ ಬರಹ ಸಂಶೋಧನೆ ಬೋರ್ಡ ದ್ರಾವಣ ಟೆಕ್ನಿಕ್ ರಾಷ್ಟ್ರೀಯ ಪ್ರಶಸ್ತಿ ಹಲವು ಪ್ರಶಸ್ತಿ ಸನ್ಮಾನ ಸಾಧಕ ಕೋತಿ ಕೋವಿ ಪರಿಸರ ಉಳಿವಿಗಾಗಿ ಸಿಮೆಂಟ್ ಶೀಟಿನಲ್ಲಿ ಜೇನು ಪೆಟ್ಟಿಗೆ ಪ್ರಕೃತಿ ವೈಚಿತ್ರಗಳ ಗಿಡಮೂಲಿಕೆಗಳ ಔಷಧಿಯ ವೈವಿಧ್ಯ ಬರಹಗಳನ್ನು ಸುಂದರ ಲೇಖನಗಳನ್ನು ನಾಡಿನಾದ್ಯಂತ ಪತ್ರಿಕೆಗಳಲ್ಲಿ ಗ್ರಾಮೀಣ ಭಾಗದ ಹವ್ಯಾಸಿ, ವರದಿಗಾರರಾಗಿ ಅಲ್ಲವೇ ವಿನೂತನ ಪರಿಕಲ್ಪನೆ ಯೊಂದಿಗೆ ಸ್ವರ ಸಿಂಚನ ಕಲಾತಂಡ ದ ಸಂಗೀತವನ್ನು ಪ್ರಸರಿಸುವಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಕಲಾ ಪ್ರೋತ್ಸಾಹಕರಾಗಿ ಕಲಾ ನಿರ್ದೇಶಕರಾಗಿದ್ದು ಕೃಷಿ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ್ ಪೆರ್ನಾಜೆ ಸಾಧನೆಗೆ ಶಾಸಕ ಅಶೋಕ್ ಕುಮಾರ್ ರೈ ಶಾಲು ಪೇಟ ಹೊದಿಸಿ ಸನ್ಮಾನ ಪತ್ರಗಳನ್ನಿತ್ತು ಸನ್ಮಾನಿಸಿದರು.

ಕಂಬಳ ಸಮಿತಿಯ ಗೌರವಾಧ್ಯಕ್ಷ ರಾದ ವಿನಯ್ ಕುಮಾರ್ ಸೊರಕೆ ಅವರು ಹಣ್ಣು ಹಂಪಲುಗಳನ್ನಿತ್ತು ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿವಿ ಸನ್ಮಾನ ಪತ್ರವಾಚಿಸಿದರು. ಅತಿಥಿಗಳು, ಖ್ಯಾತ ಚಲನಚಿತ್ರ ನಟ ನಟಿಯರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ವಸಂತಕುಮಾರ್ ರೈ ದುಗ್ಗಳ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.

LEAVE A REPLY

Please enter your comment!
Please enter your name here