






ರಾಮಕುಂಜ: ಕನ್ನಡದ ಪ್ರಸಿದ್ಧ ಚಾನೆಲ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಆಲಂಕಾರಿನ ಅದ್ವಿಕಾ ಬಾಕಿಲ ಭಾಗವಹಿಸುತ್ತಿದ್ದಾರೆ.



ಶ್ರೀ ರಾಮಕುಂಜೇಶ್ವರ ವಿದ್ಯಾಲಯ ರಾಮಕುಂಜ ಇಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಭರತನಾಟ್ಯವನ್ನು ಪ್ರಮೀಳಾಲೋಕೇಶ್, ಪಾಶ್ಚ್ಯಾತ್ಯ ನೃತ್ಯವನ್ನು ಆನಂದ ಬಿಸಿರೋಡ್, ಕರಾಟೆಯನ್ನು ಚಂದ್ರಶೇಖರ ಕನಕಮಜಲು, ಕೊಳಲು- ಶ್ರೀಪತಿ ರಾವ್ ಹಾಗೂ ಅಬಕಾಸ್ ತರಗತಿಯನ್ನು ಪ್ರಪುಲ್ಲ ಗಣೇಶ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದಲ್ಲದೆ ಚಿತ್ರಕಲೆ ಹಾಗೂ ಕರಕುಶಲ ಕಲೆ ಇದರಲ್ಲೂ ತರಬೇತಿಯನ್ನು ಪಡೆಯುತ್ತಿರುವ ಇವರು ಈಗಾಗಲೇ ಉದಯ ಟಿವಿಯ ಧ್ರುವದಸರ ಹಾಗೂ ನಮ್ಮ ಟಿವಿಯ ಡಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ನೃತ್ಯವನ್ನು ನೀಡಿರುವುದರ ಜೊತೆಗೆ ಕಿರುಚಿತ್ರಗಳಲ್ಲೂ ಅಭಿನಯಿಸಿರುತ್ತಾಳೆ.




ಈಕೆ ಆಲಂಕಾರು ನಿವಾಸಿ ದಿ| ಪ್ರದೀಪ್ ಬಾಕಿಲ ಹಾಗೂ ಪೆರಾಬೆ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಹೇಮಲತಾ ಪ್ರದೀಪ್ ಇವರ ಸುಪುತ್ರಿ. ಈಕೆ ಭಾಗವಹಿಸಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಕಾರ್ಯಕ್ರಮ ಜ.31 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9:೦೦ ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.










