ಕುರಿಂಜ ಕೋಡಿಯಾರ್ ಮಣಿಯಾಣಿ ತರವಾಡು ಮನೆ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಅರಿಯಡ್ಕ ಗ್ರಾಮದ ಕುರಿಂಜ ಕೋಡಿಯಲಾರ್ ಮಣಿಯಾಣಿ ತರವಾಡು ಮನೆ ಕುರಿಂಜ ಇಲ್ಲಿ ಫೆ. 18 ರಿಂದ 21ರ ವರೆಗೆ ನಡೆಯಲಿರುವ ನೂತನ ಮನೆಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ. 30 ರಂದು ಕುರಿಂಜ ಕೋಡಿಯಲಾರ್ ತರವಾಡು ಮನೆ ವಠಾರದಲ್ಲಿ ನಡೆಯಿತು. ನೆಲ್ಲಿತಟ್ಟು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ, ನ್ಯಾಯವಾದಿ ಅಶೋಕ್ ಕುಮಾರ್, ಅತ್ತನಡಿ ತರವಾಡಿನ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಹಾಗೂ ಕುಳದ ತರವಾಡಿನ ಶಿವರಾಮ ಮಣಿಯಾಣಿ ಇವರ ಮುಖಾಂತರ ಅನಾವರಣಗೊಳಿಸಲಾಯಿತು.


ಈ ಸಂದರ್ಭದಲ್ಲಿ ಕುಟುಂಬದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಸೀತಾರಾಮ ಮಣಿಯಾಣಿ ಕೂಟ್ಲುಬಾಗಿಲು, ಗೌರವ ಸಲಹೆಗಾರ ವಾಸು ಮಾಸ್ತರ್ ಕುರಿಂಜ, ಚೆರಿಯಕುಂಞಿ ಮಣಿಯಾಣಿ ಪೊನ್ನೆತ್ತಳ್ಕ, ಮಹಾಲಿಂಗ ಮಣಿಯಾಣಿ ಕುಂಟಾಪು, ಆಡಳಿತ ಸಮಿತಿಯ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಬೆಳ್ಳಾರೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಂಞಿ ರಾಮ ಮಾಸ್ತರ್ ಮಾನ್ಯ, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೈಲೇಶ್ ಯಾದವ್ ಪೊನ್ನೆತ್ತಳ್ಕ, ಕಾರ್ಯದರ್ಶಿ ತೇಜಸ್ ಯಾದವ್ ಚಾಲ್ಯಾರು, ಆಡಳಿತ ಸಮಿತಿಯ ಕೋಶಾಧಿಕಾರಿ ರವಿಶಂಕರ್ ಯಾದವ್ ಬಜ ನೆಟ್ಟಣಿಗೆ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಚಂದ್ರಶೇಖರ ಮಣಿಯಾಣಿ ಬೈರಮೂಲೆ, ಕುಟುಂಬದ ಹಿರಿಯರು, ಸಮಿತಿಯ ಸದಸ್ಯರು, ಹಿತೈಷಿಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.


ಫೆ.18-21 ಸಂಭ್ರಮ
ಅರಿಯಡ್ಕ ಗ್ರಾಮದ ಕುರಿಂಜ ಕೋಡಿಯಲಾರ್ ಮಣಿಯಾಣಿ ತರವಾಡು ಮನೆಯ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ಫೆ. 18 ರಿಂದ 21ರ ವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here