‘ಬಿರುಮಲೆಬೆಟ್ಟ ಪ್ರವಾಸಿತಾಣವಾಗಿಸಲು ಇನ್ನೂ ರೂ.2 ಕೋಟಿ ಅನುದಾನ’- ಬೀರಮಲೆ ಉತ್ಸವದಲ್ಲಿ ಶಾಸಕ ಅಶೋಕ್ ರೈ

0

ಪುತ್ತೂರು: ಅಭಿವೃದ್ಧಿ ಕಾರ್ಯಕ್ಕೆ ಸರಕಾರ ಅನುದಾನ ನೀಡಿದಾಗ ಕಣ್ಣಿಗೆ ಕಾಣುವ ಹಾಗೆ ಅಭಿವೃದ್ಧಿ ಮಾಡಿ. ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಈಗಾಗಲೇ ರೂ.2 ಕೋಟಿ ಅನುದಾನ ನೀಡಿದ್ದು ರೂ.1 ಕೋಟಿಯ ಕೆಲಸ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ರೂ.2 ಕೋಟಿ ಅನುದಾನ ನೀಡುತ್ತೇನೆ. ಬೀರಮಲೆ ಬೆಟ್ಟದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೆಡಿ ಮಾಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಫೆ.8 ರಂದು ಬೀರಮಲೆ ಬೆಟ್ಟದಲ್ಲಿ ಜರಗಿದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ‘ಬೀರಮಲೆ ಉತ್ಸವ-2026’ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ, ಉದ್ಘಾಟಿಸುವ ಮೂಲಕ ಮಾತನಾಡಿದರು. ಬೀರಮಲೆ ಬೆಟ್ಟದ ಅಭಿವೃದ್ಧಿ ಕನಸನ್ನು ಕಂಡವರು ಆಗಿನ ತಹಶೀಲ್ದಾರ್ ಕೋಚಣ್ಣ ರೈ. ಎತ್ತರದ ಪ್ರದೇಶವಾಗಿರುವ ಈ ಬೀರಮಲೆ ಬೆಟ್ಟವು ಒಳ್ಳೆಯ ವಾತಾವರಣ, ಗ್ರೀನರಿಯಿಂದ ಕೂಡಿದ್ದು ಕುಟುಂಬ ಸಮೇತರಾಗಿ ವೀಕ್ಷಣೆ ಮಾಡಲು ಒಳ್ಳೆಯ ಜಾಗವಾಗಿದೆ. ಅಲ್ಲಲ್ಲಿ ಪಾರ್ಕ್ ಮಾಡಿ ಅದರ ನಿರ್ವಹಣೆ ಮಾಡದೆ ಪಾರ್ಕ್ ಹಾಳಾಗುವುದಕ್ಕಿಂತ ಬೀರಮಲೆಯಲ್ಲಿಯೇ ಸುಸಜ್ಜಿತ ಪಾರ್ಕ್ ಮಾಡೋಣ. ಅಲ್ಲಲ್ಲಿ ಕೆರೆ ಅಭಿವೃದ್ಧಿಗೆ ಹಣ ಸುರಿಯುವ ಬದಲು ಮಹಾಲಿಂಗೇಶ್ವರ ದೇವಳದ ಕೆರೆಯನ್ನು ಅಭಿವೃದ್ಧಿ ಮಾಡೋಣ ಎಂದ ಅವರು ಪುತ್ತೂರಿಗೆ ಮೆಡಿಕಲ್ ಕಾಲೇಜು, ಮುಂಡೂರಿನಲ್ಲಿ ಆರ್.ಟಿ.ಒ ಟ್ರ್ಯಾಕ್, ಆಟದ ಮೈದಾನ ಮಾಡುವುದರಿಂದ ಶಾಶ್ವತ ಹೆಸರು ಗಳಿಸುವಂತಾಗಿದೆ. ಆದ್ದರಿಂದ ಶಾಶ್ವತ ಪ್ರಾಜೆಕ್ಟ್ ಮಾಡಿದಾಗ ಎಷ್ಷೇ ವರ್ಷ ಹೋದರೂ ಮಾಡಿದವರ ಹೆಸರು ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.


ಅಶೋಕ್ ರೈರವರು ಆಶ್ವಾಸನೆಯೊಂದಿಗೆ ಫಾಲೋಅಪ್ ಕೂಡ ಮಾಡುತ್ತಾರೆ-ಎ.ಜೆ ರೈ:
ಅಧ್ಯಕ್ಷತೆ ವಹಿಸಿದ ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಎ.ಜಗಜ್ಜೀವನ್‌ದಾಸ್ ರೈರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರಿನ ಎತ್ತರವಾದ ಪ್ರಕೃತಿ ರಮಣೀಯ ತಾಣವಾಗಿದೆ ಬೀರಮಲೆ ಬೆಟ್ಟ. ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಸೂರ್ಯನ ಪ್ರಕಾಶವನ್ನು ಇಲ್ಲಿ ಕಾಣಬಹುದಾಗಿದೆ. ತಹಶಿಲ್ದಾರ್ ಕೋಚಣ್ಣ ರೈರವರು ಬೀರಮಲೆ ಹಿಲ್ ಡೆವಲಪ್ಮೆಂಟ್ ಪ್ರಾಜೆಕ್ಟ್‌ನಡಿಯಲ್ಲಿ ಬೀರಮಲೆ ಬೆಟ್ಟದಲ್ಲಿ ರಸ್ತೆ, ಪಾರ್ಕ್, ಡಿಜಿಟಲ್ ಲೈಟ್ಸ್, ಗಿಡಮರಗಳು ಅಭಿವೃದ್ಧಿ ಹೊಂದುತ್ತಾ ಬಂದಿದೆ ಎಂದ ಅವರು ಶಾಸಕ ಅಶೋಕ್ ರೈರವರು ಬೀರಮಲೆ ಬೆಟ್ಟದ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಕೇವಲ ಆಶ್ವಾಸನೆ ನೀಡುವುದು ಮಾತ್ರವಲ್ಲ ನೀಡಿದ ಆಶ್ವಾಸನೆಯ ಫಾಲೋ ಅಪ್ ಮಾಡುತ್ತಾರೆ. ಶಾಸಕ ಅಶೋಕ್ ರೈರವರ ರೂ.ಎರಡು ಕೋಟಿ ಅನುದಾನದಲ್ಲಿ ಡಿಜಿಟಲ್ ಟ್ರೀ, ಕಲರ್ ಫುಲ್ ಲೈಟ್ಸ್‌ಗಳು ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಆಗಿದ್ದು ಮುಂದಿನ ದಿನಗಳಲ್ಲಿ ಬೀರಮಲೆ ಬೆಟ್ಟ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಆಗಬೇಕಿದ್ದು ಬೀರಮಲೆ ಬೆಟ್ಟವನ್ನು ಪ್ರವಾಸೋದ್ಯಮ ತಾಣವಾಗಿ ಪರಿವರ್ತನೆ ಹೊಂದುವುದು ನಮ್ಮ ಆದ್ಯತೆಯಾಗಿದೆ ಎಂದರು.


ಸ್ಪರ್ಧಾ ಫಲಿತಾಂಶ:
ಚಿತ್ರಕಲಾ ಸ್ಪರ್ಧೆ(ಪ್ರಾಥಮಿಕ ವಿಭಾಗ):ಲಿಖಿತಾ ಪಿ.ಚೌವ್ಹಾಣ್(ಪ್ರ), ಸಾನ್ವಿ ಬಿ.ಎಸ್(ದ್ವಿ), ಸಮಾಧಾನಕರ ಬಹುಮಾನಗಳು:ಜ್ಯೋತ್ಸ್ನಾ, ಶಿವಾನಿ ವಿ, ಕೆ.ಎಸ್ ವಿದಿತ್, ಧೀರನ್, ಆಯುಷಿ, ಪ್ರೌಢಶಾಲೆ ವಿಭಾಗ:ವಿಘ್ನೇಶ್ ವಿಶ್ವಕರ್ಮ(ಪ್ರ), ಈಶಾನ್(ದ್ವಿ), ಸಮಾಧಾನಕರ ಬಹುಮಾನಗಳು:ಆಧ್ಯಾನ್, ಈಶಾನಿ ಭಟ್, ಭೂಮಿಕಾ, ಅದಿತಿ ಎಸ್, ಸೌಂದರ್ಯ


ಗಾಳಿಪಟ ಸ್ಪರ್ಧೆ(ಪ್ರಾಥಮಿಕ ವಿಭಾಗ):ಹಿಮಾದ್ರಿ(ಪ್ರ), ಗಹನ್(ದ್ವಿ), ಸಮಾಧಾನಕರ ಬಹುಮಾನಗಳು:ಪ್ರಶ್ವಿ, ಅಶ್ಮಿತಾ, ಸಾನ್ವಿತ, ರಿಯಾಜ್, ಲಿಖಿತ್, ಪ್ರೌಢಶಾಲಾ

ವಿಭಾಗ:
ಚಾರುದತ್ ಪಕ್ಕಳ(ಪ್ರ), ನಿಖಿಲ್ ಕುಮಾರ್(ದ್ವಿ), ಸಮಾಧಾನಕರ ಬಹುಮಾನಗಳು: ಅಜಿಂತ್ ಕೃಷ್ಣ, ಪ್ರಣಾಮ್, ಭೀಮ, ಶಾದ್, ತನ್ಮಯ್, ಕಾಲೇಜು ವಿಭಾಗ:ಮಹಾಲಸ ಕೋಡಿಕ್ಕಲ್(ಪ್ರ), ಪರಮೇಶ್ವರ(ದ್ವಿ), ಸಾರ್ವಜನಿಕ ವಿಭಾಗ:ಸಾಯಿರಾಮ ರಾವ್(ಪ್ರ), ಅಜಯ್(ದ್ವಿ)


ಮನರಂಜನೆ:
ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಹಾಜರಿದ್ದ ಪುಟಾಣಿಗಳು, ಯುವಕರು, ಹಿರಿಯರಿಂದ ಹಾಡುಗಳು ಹೊರಹೊಮ್ಮಿದವು. ಮಕ್ಕಳಿಗೆ ತೊಟ್ಟಿಲ ಆಟ, ವಿವಿಧ ಬಗೆಯ ಸ್ವಾದಿಷ್ಟ ಆಹಾರಗಳ ಫುಡ್ ಕೋರ್ಟ್, ವಿವಿಧ ಗಾತ್ರ, ಸೂತ್ರ, ವಿನ್ಯಾಸದ ಗಾಳಿಪಟಗಳು ಗಮನ ಸೆಳೆದವು. ಕಲ್ಲಾರೆ ವರ್ಣಕುಟೀರ ರಂಗ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಣ್ಣಿಗೆ ಬಟ್ಟೆ ಕಟ್ಟಿ ತ್ರೆಡ್ ಆರ್ಟ್, ರೇಖಾ ಚಿತ್ರ, ಸ್ಯಾಂಡ್ ಆರ್ಟ್ ಪ್ರಸ್ತುತಪಡಿಸಿ ನೆರೆದ ಪ್ರೇಕ್ಷಕರನ್ನು ಮನರಂಜಿಸಿದರು.


ಕಿಶನ್ ಬಿ.ವಿ ಪ್ರಾರ್ಥಿಸಿದರು. ಪುತ್ತೂರು ಡಿವೈಎಸ್‌ಪಿ ಪ್ರಮೋದ್ ಕುಮಾರ್, ಪುತ್ತೂರು ಎಸಿಎಫ್ ಸುಬ್ಬಯ್ಯ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಉಪಾಧ್ಯಕ್ಷೆ ಡಾ|ಸತ್ಯವತಿ ಆಳ್ವ, ಕಾರ್ಯದರ್ಶಿ ನಿತಿನ್ ಪಕ್ಕಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ, ಕೇಶವ ನಾಯಕ್, ಜೈರಾಜ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಎಂ.ಎಲ್.ಎ ಓಡೆ ಪೋತೆ, ಅರೆಗ್ ಇಂದು ಮಾತ ತೋಜ್ಜ್ಯಾ..
ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳು ಡಾಮಾರು ಎದ್ದು ಹೋಗಿ ಗುಂಡಿಗಳು ಬಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ “ಎಂ.ಎಲ್.ಎ ಓಡೆ ಪೋತೆ, ಅರೆಗ್ ಇಂದು ಮಾತ ತೋಜ್ಜ್ಯಾ.” ಎಂದು ಹಲವಾರು ಮಂದಿ ವ್ಯಂಗ್ಯವಾಗಿ ಪೋಸ್ಟ್ ಮಾಡಿರುತ್ತಾರೆ. ಈ ಬಾರಿ ನಿರಂತರ ಮಳೆಯಾದ್ದರಿಂದ ರಸ್ತೆಗೆ ಡಾಮಾರು ಅಥವಾ ಇಂಟರ್‌ಲಾಕ್ ಅಳವಡಿಸಲು ಅಸಾಧ್ಯವಾಗಿತ್ತು. ಬಳಿಕ ರಸ್ತೆಗೆ ಡಾಮಾರು, ಇಂಟರ್‌ಲಾಕ್ ಹಾಕಿದ್ದು ರಸ್ತೆಗಳಲ್ಲಿ ಸಂಚರಿಸಲು ಸುಗಮ ಅವಕಾಶ ಮಾಡಿಕೊಟ್ಟ ಮೇಲೆ ಶಾಸಕರಿಗೆ ಅಭಿನಂದನೆಗಳು ಎಂದು ಒಂದೇ ಒಂದು ಪೋಸ್ಟ್ ಇಲ್ಲ. ವ್ಯವಸ್ಥೆಯಲ್ಲಿ ತಪ್ಪಾದಾಗ ವಿಚಾರಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದನ್ನು ಸರಿಪಡಿಸಿದಾಗ ಎಲ್ಲರೂ ಮರೆತು ಬಿಡುವುದು ಇದು ನಮ್ಮ ವ್ಯವಸ್ಥೆ.
-ಅಶೋಕ್ ಕುಮಾರ್ ರೈ, ಶಾಸಕರು

ವೆಬ್‌ಸೈಟ್ ಉದ್ಘಾಟನೆ..
ಬೀರಮಲೆ ಬೆಟ್ಟದ ಪ್ರೇಮಿಯಾಗಿರುವ ಅವಿನಾಶ್‌ರವರು, ತನ್ನ ಸ್ವಂತ ಖರ್ಚಿನಲ್ಲಿ ಬೀರಮಲೆ ಬೆಟ್ಟದ ಅಭಿವೃದ್ಧಿ ಯೋಜನೆಯ ವೆಬ್‌ಸೈಟ್ ಅನ್ನು ಶಾಸಕ ಅಶೋಕ್ ಕುಮಾರ್ ರೈರವರು ಮೊಬೈಲ್ ಅದುಮುವ ಮೂಲಕ ಅನಾವರಣಗೊಳಿಸಿದರು. ಮುಂದಿನ ದಿನಗಳಲ್ಲಿ ಬೀರಮಲೆ ಬೆಟ್ಟದಲ್ಲಿ ಸಮಿತಿಯ ವತಿಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಈ ವೆಬ್‌ಸೈಟ್‌ನಲ್ಲಿ ಕಾಣ ಸಿಗಲಿದೆ ಎಂದು ಸಮಿತಿ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರೈ ಹೇಳಿದರು.

ಸನ್ಮಾನ..
ಈ ಸಂದರ್ಭದಲ್ಲಿ ಬೀರಮಲೆ ಬೆಟ್ಟದ ಅಭಿವೃದ್ಧಿ ಹಿನ್ನೆಲೆಯಲ್ಲಿ ಅನುದಾನ ನೀಡಿ ಸಹಕರಿಸಿದ ಶಾಸಕ ಅಶೋಕ್ ಕುಮಾರ್ ರೈ, ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯೊಂದಿಗೆ ಸದಾ ಸಹಕರಿಸುವ ಹದಿನಾರು ಜನ ವಿಶೇಷ ಚೇತನರನ್ನು ಸಲಹುವ ಪ್ರಜ್ಞಾ ಆಶ್ರಮದ ಅಣ್ಣಪ್ಪರವರುಗಳನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here