






ಪುತ್ತೂರು: ‘ಕೆ.ಜಿ.ಎನ್ ಸಿಟಿ’ ಫ್ರುಟ್ಸ್ ಮತ್ತು ತರಕಾರಿ ಮಾರಾಟ ಮಳಿಗೆ ಫೆ.9ರಂದು ಬೊಳ್ವಾರು ರಿಲಯನ್ಸ್ ಪಾಯಿಂಟ್ ಹತ್ತಿರದ ಆಕ್ಸಿಸ್ ಬ್ಯಾಂಕ್ ಮುಂಭಾಗದಲ್ಲಿ ಶುಭಾರಂಭಗೊಂಡಿತು.


ಶೈಖುನಾ ಮಹಮೂದುಲ್ ಫೈಝಿ ಓಲೆಮುಂಡೋವು ಅವರು ಮಳಿಗೆಯನ್ನು ಉದ್ಘಾಟಿಸಿ, ಪ್ರಾರ್ಥನೆ ನೆರವೇರಿಸಿ ಶುಭ ಹಾರೈಸಿದರು. ಮಳಿಗೆಯಲ್ಲಿ ಎಲ್ಲಾ ಬಗೆಯ ತರಕಾರಿ, ಫ್ರುಟ್ಸ್ ಐಟಂಗಳು ಲಭ್ಯವಿದ್ದು ರಖಂ ಮತ್ತು ಚಿಲ್ಲರೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು ತರಕಾರಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು, ರಿಯಾಯಿತಿ ದರದ ಮಾರಾಟಕ್ಕೆ ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಕೆ.ಜಿ.ಎನ್ ಸಿಟಿ ಫ್ರುಟ್ಸ್ & ತರಕಾರಿ ಮಳಿಗೆಯ ಮಾಲಕರು ತಿಳಿಸಿದ್ದಾರೆ.














