ಶ್ರಮದಾನದ ಮೂಲಕ ಕರ್ಗಲ್ಲು – ಓಜಾಲ ರಸ್ತೆಯ ಹೊಂಡಕ್ಕೆ ಮುಕ್ತಿ

0

ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ.) ಟ್ರಸ್ಟ್ ಓಜಾಲದ ಸದಸ್ಯರಿಂದ ಹೀಗೊಂದು ಸಾಮಾಜಿಕ ಕಾರ್ಯ

ಪುತ್ತೂರು: ಹೊಂಡ ಗೊಂಡಿಗಳಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದ ಕರ್ಗಲ್ಲು – ಓಜಾಲ ರಸ್ತೆಯನ್ನು ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ.) ಟ್ರಸ್ಟ್ ಓಜಾಲ ಇದರ ಪದಾಧಿಕಾರಿಗಳು ಶ್ರಮದಾನದ ಮೂಲಕ ಮಣ್ಣು ಹಾಕಿ ಹೊಂಡಗಳನ್ನು ಮುಚ್ಚಿ ಮಾದರಿ ಕೆಲಸ ಮಾಡಿದ್ದಾರೆ.

ಕಳೆದ ಹಲವಾರು ಸಮಯಗಳಿಂದ ಕಬಕದಿಂದ – ಓಜಾಲಾ ಹಾಗೂ ಕೊಡಿಪ್ಪಾಡಿ ತೆರಳುವ ರಸ್ತೆ ಹೊಂಡಗುಂಡಿಗಳಿಂದಾಗಿ ತೀರಾ ಸೋಚನೀಯ ಸ್ಥಿತಿ ತಲುಪಿ ವಾಹನ ಸಂಚಾರಕ್ಕೆ ತೊಡಕಾಗಿದೆ. ದಿನಂಪ್ರತಿ ಶಾಲಾ ವಾಹನಗಳ ಸಹಿತ ಇತರ ಹಲವಾರು ವಾಹನಗಳು ಹರಸಾಹಸ ಪಟ್ಟು ಸಂಚರಿಸುತ್ತಿದ್ದವು.
ಆದರೂ ಈ ಬಗ್ಗೆ ಯಾರೂ ಗಮನ ಹರಿಸದೇ ಇರುವುದರಿಂದ ಸಾರ್ವಜನಿಕರಿಗೆ ರಸ್ತೆ ಸಂಚಾರವೇ ಕಷ್ಟಕರವಾಗಿತ್ತು. ಸಾರ್ವಜನಿಕರ ಈ ನರಕಯಾತನೆಯನ್ನು ಮನಗಂಡ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯವಾಗಿರುವ ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ ಇದರ ಸದಸ್ಯರು ಶ್ರಮದಾನದ ಮೂಲಕ ಕರ್ಗಲ್ಲುವಿನಿಂದ ಪಾಡೇಲು ವರೆಗಿನ 3 ಕಿ.ಮೀ ರಸ್ತೆ ಹೊಂಡವನ್ನು ಮಣ್ಣು ಹಾಕಿ ಮುಚ್ಚು ಕೆಲಸ ಮಾಡಿದ್ದಾರೆ‌.


ಕ್ಲಬ್ ನ ಅಧ್ಯಕ್ಷರಾದ ಮಿಥುನ್ ಓಜಾಲ, ಉಪಾಧ್ಯಕ್ಷರಾದ ಕಿರಣ್ ಓಜಾಲ, ಮಾಜಿ ಅಧ್ಯಕ್ಷರಾದ ಮುರಳೀಧರ ಕೊರ್ಜೆ ಸೇರಿದಂತೆ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು‌. ಕ್ಲಬ್ ಸದಸ್ಯರ ಈ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here