ಒಳಿತು ಮಾಡು ಮನುಷ ತಂಡ, ಸಜಿಪ ಟೀಮ್ ಭಜರಂಗಿಯಿಂದ ಸಹಾಯಹಸ್ತ

0

ಪುತ್ತೂರು: ಕೆಮ್ಮಾಯಿ ಭರತ್‌ಪುರ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್‌ನ ಒಳಿತು ಮಾಡು ಮನುಷ ತಂಡದಿಂದ ಟೀಮ್ ಭಜರಂಗಿ ಸಜೀಪ ಸಹಯೋಗದೊಂದಿಗೆ ನಂದಾವರ ಶ್ರೀವಿನಾಯಕ ದುರ್ಗಾಂಬಾ ಕ್ಷೇತ್ರದ ಮಹಾರಥೋತ್ಸವದಲ್ಲಿ ನಡೆದ ಭವತಿ ಬಿಕ್ಷಂ ದೇಹಿ ನಿಧಿ ಸಂಗ್ರಹದಲ್ಲಿ ಸಂಗ್ರಹವಾದ ಮೊತ್ತವನ್ನು ಶ್ವಾಸಕೋಶದ ರಕ್ತನಾಳದ ಸಮಸ್ಯೆಯಿಂದಾಗಿ ಬಳಲುತ್ತಿರುವ ಮಂಗಳೂರು ತಾಲೂಕು ಇರಾ ಗ್ರಾಮದ ಕೇಶವ ಜೋಗಿ ಇವರಿಗೆ ತುರ್ತು ನಿಧಿಯಾಗಿ 15,೦೦೦ ರೂ. ಹಾಗೂ 25 ಕೆಜಿ ಅಕ್ಕಿಯನ್ನು ಅವರ ಮನೆಗೆ ತೆರಳಿ ನೀಡಲಾಯಿತು.

ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ಅಧ್ಯಕ್ಷೆ ಶೋಭಾ ಮಡಿವಾಳ, ಕಾರ್ಯದರ್ಶಿ ಕಾವ್ಯ ಹೆಗ್ಡೆ ಹಾಗೂ ಟೀಮ್ ಭಜರಂಗಿ ಸಜೀಪ ಸಂಘಟನೆಯ ಲೋಹಿತ್ ಪಣೋಲಿಬೈಲು, ಸುನಿಲ್ ಸಜೀಪ, ಪ್ರಸಾದ್ ಮಯ್ಯಲ, ಮೋಕ್ಷಿತ್ ದೇರಾಜೆ, ನಿರಂಜನ್ ತಲೆಮೊಗರು, ವೈಷ್ಣವಿ ದೇರಾಜೆ ಹಾಗೂ ದೀಕ್ಷಾ ಬಂಟ್ವಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here