ಪೆರಿಯಶಾಂತಿ: ಲಾರಿಗಳ ಡಿಕ್ಕಿ-ಚಾಲಕನಿಗೆ ಗಾಯ

0

ನೆಲ್ಯಾಡಿ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಇನ್ನೊಂದು ಲಾರಿ ಡಿಕ್ಕಿಯಾಗಿ, ಚಾಲಕ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಫೆ.17ರಂದು ರಾತ್ರಿ 11.30ಕ್ಕೆ ನಡೆದಿದೆ.


ಹಾಸನ ನಿವಾಸಿ ಹೆಚ್.ಎಸ್.ಪರಮೇಶ ಎಂಬವರು ಅಶೋಕ್ ಲೈಲೇಂಡ್ ಲಾರಿ(ಡಬ್ಲ್ಯುಬಿ 11, ಡಿ 0045)ಯಲ್ಲಿ ಮಂಗಳೂರಿನ ಕಿನ್ನಿಗೋಳಿಯಿಂದ ಸುಣ್ಣ ತುಂಬಿಸಿಕೊಂಡು ಸಕಲೇಶಪುರಕ್ಕೆ ರಾಷ್ಠೀಯ ಹೆದ್ದಾರಿ 75ರಲ್ಲಿ ಹೋಗುತ್ತಿದ್ದವರು ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂಬದಿಯಿಂದ ಮೂರ್ತಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಲಾರಿ (ಕೆಎ 02, ಎಎಚ್ 9315) ಡಿಕ್ಕಿಯಾಗಿದೆ. ಘಟನೆಯಲ್ಲಿ ಎರಡೂ ಲಾರಿಗಳು ಜಖಂಗೊಂಡಿದ್ದು ಹಿಂಬದಿಯಿಂದ ಡಿಕ್ಕಿಯಾದ ಲಾರಿಯ ಚಾಲಕ ಮೂರ್ತಿ ಎಂಬವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಘಟನೆ ಕುರಿತು ಹೆಚ್.ಎಸ್.ಪರಮೇಶ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here