ಫೆ.22 ಫಿಲೋಮಿನಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ-ಮುಚ್ಚಿಲೋಟ್ ಕ್ರಿಕೆಟ್ ಲೀಗ್

0

ಪುತ್ತೂರು:ಪೆರ್ಣೆ ಶ್ರೀಮುಚ್ಚಿಲೋಟ್ ಭಗವತೀ ಕ್ಷೇತ್ರ ವ್ಯಾಪ್ತಿಯ ಸಮುದಾಯ ಬಾಂಧವರ ಎಂಟು ತಂಡಗಳ ನಿಗದಿ ಓವರ್‌ಗಳ ಓವರ್ ಆರ್ಮ್ ಲೀಗ್ ಕ್ರಿಕೆಟ್ ಪಂದ್ಯಾಟ ಮುಚ್ಚಿಲೋಟ್ ಕ್ರಿಕೆಟ್ ಲೀಗ್ ಎಂಸಿಎಲ್-2026 ಫೆ.22ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರೋಪಾಡಿ ತರವಾಡು ಮನೆಯ ರಾಮಕೃಷ್ಣ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಹಿಂದೂ ಚಿಂತಕರು, ಅಂತರ್ಜಲ ಶೋಧಕರರಾಗಿರುವ ಚಂದ್ರಹಾಸ ಮುರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನ ರಾಧಾಕೃಷ್ಣ , ಎಂಸಿಎಲ್‌ನ ನಿರ್ದೇಶಕ ಮಹೇಶ್ ಪಿ. ಅತಿಥಿಗಳಾಗಿ ಆಗಮಿಸಲಿದ್ದಾರೆ. ಚಲನ ಚಿತ್ರನಟ ಕೌಶಿಕ್ ರಾಮ ಪಾಟಾಳಿ ಟ್ರೋಫಿ ಅನಾವರಣಗೊಳಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ಎಂಸಿಎಫ್‌ನ ಸೇಫ್ಟೀ ಮ್ಯಾನೇಜರ್ ರವಿಚಂದ್ರ ಪದವಿನಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ದುಬೈ ಉದ್ಯಮಿ ಶಿವಶಂಕರ ನೆಕ್ರಾಜೆ, ಸೆಲ್ಕೋ ಸೋಲಾರ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಪ್ರಸಾದ್ ಬಿ., ಮುತ್ತೂಟ್ ಕ್ಯಾಪಿಟಲ್‌ನ ಮ್ಯಾನೇಜರ್ ಗುರುರಾಜ್ ಸೀತಾಂಗೋಳಿ, ಆಪಲ್ ಕಂಪನಿಯ ಇಂಜಿನಿಯರ್ ದೀಕ್ಷಿತ್ ಬೆಳ್ಳಾರೆ, ಎಂಸಿಎಲ್ ನಿರ್ದೇಶಕ ಅಭಿಲಾಶ್ ಮಾಂಬಾಡಿ, ಮಂಗಳೂರು ರಿಲಯನ್ಸ್ ಜಿಯೋ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಹರೀಶ್ ಅರಂತಡ್ಕ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪಂದ್ಯಾಟದಲ್ಲಿ ಪ್ರಥಮ ರೂ.25,000, ದ್ವಿತೀಯ ರೂ.15,000 ನಗದು ಹಾಗೂ ಎಂಸಿಎಲ್ ಟ್ರೋಫಿ, ತೃತೀಯ ಮತ್ತು ಚತುರ್ಥ ತಂಡಗಳಿಗೆ ಎಂಸಿಎಲ್ ಟ್ರೋಫಿ ನೀಡಲಾಗುವುದು. ಎಲ್ಲಾ ಪಂದ್ಯಾಟಕ್ಕೂ ಪಂದ್ರಶ್ರೇಷ್ಠ ಪ್ರಶಸ್ತಿ, ವೈಯಕ್ತಿಗಕ ಬಹುಮಾನಗಳಾದ ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸ್‌ಮೆನ್, ಉದಯೋನ್ಮುಖ ಆಟಗಾರ, ಶಿಸ್ತಿನ ತಂಡ, ಉತ್ತಮ ಬೌಲರ್, ಉತ್ತಮ ವಿಕೆಟ್ ಕೀಪರ್, ಅತೀ ಹೆಚ್ಚು ಸಿಕ್ಸರ್ ಹಾಗೂ ಅತೀ ಹೆಚ್ಚು ಬೌಂಡರಿ ಬಹುಮಾನಗಳನ್ನು ನೀಡಿಲಾಗುವುದು.

ಅರ್ಜುನ್ ವಾರಿಯರ್‍ಸ್, ಆಧಿ ಸ್ಟ್ರೈಕರ್‍ಸ್ ಕುಂಬ್ಳೆ, ಸ್ಟ್ರೈಕರ್‍ಸ್ ಇಲೆವೆನ್ ಸುಳ್ಯ, ಯುಕೆ ಫೈಟರ್‍ಸ್, ಸಾಮ್ರಾಟ್ ಮಾಂಬಾಡಿ, ಪಾಟಾಳಿ ಚಾಲೆಂಜರ್‍ಸ್ ಮಂಗಳೂರು, ವಾಣಿಯನ್ ವಾರಿಯರ್‍ಸ್ ಪುತ್ತೂರು ಹಾಗೂ ಭಗವತಿ ಕನ್‌ಸ್ಟ್ರಕ್ಷನ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here