ಮಾ.8,9: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ 

0

ಬಡಗನ್ನೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೖೆವಗಗಳ ವಾರ್ಷಿಕ ನೇಮೋತ್ಸವವು ಕೊರ್ಬಂಡ್ಕ ಶ್ರೀ ಶಿವರಾಮ ಹೊಳ್ಳ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿ ವಿವಿಧ ಕಾರ್ಯಕ್ರಮಗಳೊಂದಿಗೆ ಮಾ. 8 ಮತ್ತು 9ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಆ ಪ್ರಯುಕ್ತ ತಾವೆಲ್ಲರೂ ಬಂದು ಈ ದೇವತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಬರಿನರ ಸ್ವಾಮಿ ಕೊರಗಜ್ಜ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಉಪಾಧ್ಯಕ್ಷ ಸದಾನಂದ ರೈ, ಬೋಳಂಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಮರದಮೂಲೆ ಜೊತೆ ಕಾರ್ಯದರ್ಶಿ ವಿನಯಕುಮಾರ್ ದೇವಸ, ಪೂಜಾಕರ್ಮಿ ಮಾಧವ ಸಾಲಿಯಾನ್ ಮರದಮೂಲೆ, ಖಜಾಂಜಿ ಭಾಸ್ಕರ ಹೆಗ್ಡೆ ಶಬರಿನಗರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮಗಳು
ಮಾ.8ರಂದು ಬೆಳಿಗ್ಗೆ ಗಂ 7 ಕ್ಕೆ: ಗಣಪತಿಹೋಮ, 7-45ಕ್ಕೆ ಭಜನಾ ಕಾರ್ಯಕ್ರಮ ಸುಳ್ಯಪದವು ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ಮಾಧವ ನಾಯಕ್ ಇಂದಾಚೆ,ಭಜನಾ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಧ್ಯಾಹ್ನ ಗಂ 12ರಿಂದ ಸಭಾ ಕಾರ್ಯಕ್ರಮ ಮಧ್ಯಾಹ್ನ ಗಂ 1ರಿಂದ ಅನ್ನಸಂತರ್ಪಣೆ ನಡೆಯಲಿರುವುದು. ಅಪರಾಹ್ನ ಗಂ 2 ರಿಂದ ಕುಣಿತ ಭಜನೆ, ಸಂಜೆ ಗಂ 4 ರಿಂದ ಶ್ರೀ ಗುಳಿಗ ದೈವದ ನೇಮೋತ್ಸವ, , ರಾತ್ರಿ ಗಂ 8 ರಿಂದ ಶ್ರೀ ದೈವದ ಭಂಡಾರ ತೆಗೆಯುವುದು, ರಾತ್ರಿ ಗಂ 7ರಿಂದ ಗೊಂಭೆಯಾಟ, ರಾತ್ರಿ ಗಂ 8-30ರಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ ಗಂಟೆ 8-45ರಿಂದ: ಅನ್ನಸಂತರ್ಪಣೆ, ರಾತ್ರಿ ಗಂಟೆ 11-00ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ಮಾ. 9 ಸೋಮವಾರ ಪ್ರಾತಃಕಾಲ: ಪ್ರಸಾದ ವಿತರಣೆ ನಡೆಯಲಿರುವುದು.

ಭಜನಾ ಕಾರ್ಯಕ್ರಮ:
ಭಜನಾ ಕಾರ್ಯಕ್ರಮದಲ್ಲಿ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘ ಶಬರಿನಗರ ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ, ಸುಳ್ಯಪದವು, ಶ್ರೀ ಮಹಾಲಕ್ಷ್ಮೀ ವನಿತಾ ಭಜನಾ ಮಂಡಳಿ, ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರ, ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಭಜನಾ ಕಾರ್ಯಕ್ರಮವನ್ನು ಸಂಗೀತ ಮತ್ತು ಭಜನಾ ಶಿಕ್ಷಕ ದಾಮೋದರ ಯಂ. ಮರದಮೂಲೆ ನೇತೃತ್ವದಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮ:
ಮಧ್ಯಾಹ್ನ ಗಂ 12ರಿಂದ ಸಭಾ ಕಾರ್ಯಕ್ರಮ, ಶ್ರೀ ಎಡನೀರು ಮಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಆಶೀರ್ವಚ ನೀಡಲಿದ್ದಾರೆ. ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ ರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.ಸಾಮಾಜಕ ಕಾರ್ಯಕರ್ತ ಬ. ಗಣರಾಜ್ ಭಟ್ ಕೆದಿಲ ಧಾರ್ಮಿಕ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಕ್ಷೇತ್ರದ ತಂತ್ರಿಗಳಾದ ಶಿವರಾಮ ಹೊಳ್ಳ ಕೊರ್ಬಂಡ್ಕ (ಪೆರ್ಲಂಪಾಡಿ) ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕಿ ಪ್ರೇಮ ಕಲ್ಲೂರಾಯ, ಸುಬ್ರಹ್ಮಣ್ಯ ಭಟ್ ಬೀರಮೂಲೆ, ಶಿವರಾಮ ಮಣಿಯಾಣಿ ಕುಳ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ನಿಡಿಯಡ್ಕ, ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ಭಾಗವಹಿಸಲಿದ್ದಾರೆ.

ಗೌರವಾರ್ಪಣೆ:
ಉದ್ಯಮಿ ಶಿವ ಎಸ್ ಪೂಜಾರಿ ‘ನಿಸರ್ಗ’ ಈಶ್ವರಮಂಗಲ, ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ಶೇಷಪ್ಪ ಪೂಜಾರಿ ಕಡಮಗದ್ದೆ, ಸುಳ್ಯಪದವು ಆಯುಧಪೂಜಾ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ‘ಸಸ್ಟಿಕ್’ ಕನ್ನಡ್ಕ, ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಮುಖ್ಯಗುರು ಸುಕೇಶ್ ರೈ ಕುತ್ಯಾಳ, ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ(ರಿ.) ನ ಅಧ್ಯಕ್ಷ ಗುರುಕಿರಣ್ ರೈ ಸುಳ್ಯಪದವು, ಕಾಯರ್‌ ಪದವು ಮಿತ್ರವೃಂದದ ಅಧ್ಯಕ್ಷ ಯೋಗೀಶ್ ಕಾಯರ್ ಪದವು, ಸುಳ್ಯಪದವು ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ಪಿ.ಎಸ್ ಪೆರ್ನಾಜೆ, ಸುಳ್ಯಪದವು ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿ ಅಧ್ಯಕ್ಷ ಸುಶೀಲ ಕನ್ನಡ್ಕ ಸುಳ್ಯಪದವು ಮಹಾಲಕ್ಷ್ಮೀ ವನಿತಾ ಭಜನಾ ಮಂಡಳಿ ಅಧ್ಯಕ್ಷ ಪುಷ್ಪಲತಾ ಕುಲಾಲ್ ಬೀರಮೂಲೆ ಶ್ರೀ ಮಂಜುನಾಥ ರೋಡ್‌ಲೈನ್ಸ್ ಮಾಲಕ ರವಿಶಂಕರ ಯಾದವ್ ಬಜ, ಕ್ಷೇತ್ರದಲ್ಲಿ ಭಜನೆ ತರಬೇತುದಾರ ಸೇವೆ ಸಲ್ಲಿಸುತ್ತಿರುವ ದಾಮೋದರ ಯಂ. ಮರದಮೂಲೆ, ಕ್ಷೇತ್ರದಲ್ಲಿ ಯಕ್ಷಗಾನ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ್‌ ಸುಳ್ಯಪದವು, ಸುಳ್ಯಪದವು ವೀರಕೇಸರಿ ಯುವಕ ಮಂಡಲದ ಅಧ್ಯಕ್ಷ ಚೇತನ್ ಬೀರಮೂಲೆ, ಇವರುಗಳನ್ನು ಕ್ಷೇತ್ರದ ವತಿಯಿಂದ ಗೌರವಾರ್ಪಣೆ ನಡೆಯಲಿದೆ.

ಕುಣಿತ ಭಜನಾ ಕಾರ್ಯಕ್ರಮ :
ಅಪರಾಹ್ನ 2 ರಿಂದ ಸರ್ವೋದಯ ಕುಣಿತ ಭಜನೆ ಸುಳ್ಯಪದವು ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನೆ ಕನ್ನಡ ಅಂಭಾ ಭವಾನಿ ಮಕ್ಕಳ ಕುಣಿತ ಭಜನೆ ಪಾದೆಗದ್ದೆ ಇದರ ಸದಸ್ಯರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ರಾತ್ರಿ ಗಂ 7 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಪಿಲಿಕುಂಜೆ ಕಾಸರಗೋಡು ಇವರಿಂದ ನರಕಾಸುರ ವಧೆ ಹಾಗೂ ಗರುಡ ಗರ್ವಭಂಗ ಎಂಬ ಪೌರಣಿಕ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ಹಾಗೂ ರಾತ್ರಿ ಗಂ 8.30ರಿಂದ ಹಂಸಧ್ವನಿ ಆರ್ಕೆಸ್ಟ್ರಾ ಕಾಸರಗೋಡು ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.

LEAVE A REPLY

Please enter your comment!
Please enter your name here