ಸಜಂಕಾಡಿ: ಸ.ಹಿ.ಪ್ರಾ.ಶಾಲೆಯಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ)ಕಾಲೇಜು ದರ್ಬೆ ಪುತ್ತೂರು ಇದರ Consumer Forum(ಗ್ರಾಹಕ ಕ್ಲಬ್ )ವತಿಯಿಂದ ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮ ನಡೆಯಿತು.

ಸಂತ ಫಿಲೋಮಿನಾ ಕಾಲೇಜಿನ ಗ್ರಾಹಕ ಕ್ಲಬ್ ನ ಸಂಯೋಜಕ ಪ್ರವೀಣ್ ಒಟ್ಟು ಕಾರ್ಯಕ್ರಮದ ರೂಪುರೇಷೆಯನ್ನು ನೀಡಿದರು. ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಗ್ರಾಹಕ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ಕು.ವಂದ್ಯ ತೃತೀಯ ಬಿ.ಕಾಂ. ಉಪಸ್ಥಿತರಿದ್ದರು.

ಶಾಲೆಯ ಮುಖ್ಯಗುರು ಸುಮಲತಾ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮದ ಬಳಿಕ ಗ್ರಾಹಕ ಕ್ಲಬ್ ವಿದ್ಯಾರ್ಥಿ ಸದಸ್ಯರುಗಳು ನಾಟಕ,ಉಪನ್ಯಾಸ,ವಿವಿಧ ಆಟೋಟಗಳ ಮೂಲಕ ಗ್ರಾಹಕ ಜಾಗೃತಿ ಕಾರ್ಯಕ್ರಮ‌ ನಡೆಸಿಕೊಟ್ಟರು. ಗ್ರಾಹಕ ಕ್ಲಬ್ ನ ಪ್ರತಿನಿಧಿಗಳಾದ ಮುಶ್ರೀನ, ಅಸ್ನ, ಯೋಗಿತ,ಅದಿತಿ, ದಿವ್ಯದರ್ಶಿನಿ, ರೋಹಿಣಿ, ಅಮೃತಾ,ಅಪೂರ್ವ, ಲವಿಕಾ,ದ್ರುವ ,ವಿಪುಲ್ ,ಚೇತನ್, ಮನಿಶ್, ವಿಶ್ಮಿತ್, ಪ್ರಣಮ್, ಅಹದ್, ಸಫ್ರೀನ, ರೈಫನ್, ಪ್ರತೀಕ್ಷಾ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಪದವೀಧರ ಶಿಕ್ಷಕ ಗಣೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯಾ ಹಾಗೂ ಗೌರವ ಶಿಕ್ಷಕಿ ಗಾಯತ್ರಿ ಸಹಕರಿಸಿದರು.

LEAVE A REPLY

Please enter your comment!
Please enter your name here