






ಸಂಟ್ಯಾರು: ಸಂಟ್ಯಾರಿನಲ್ಲಿರುವ ಸರಸ್ವತಿ ಪುರಂನಲ್ಲಿರುವ ಸರಸ್ವತಿ ಸದನದಲ್ಲಿ ಡ್ರಾಯಿಂಗ್ ತರಗತಿಗಳ ಉದ್ಘಾಟನೆ ನಡೆಯಿತು.
ಶ್ರೀ ಸರಸ್ವತಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಶ್ರೀಮತಿ ರಂಜಿತಾ ಪ್ರಭು ತರಗತಿ ಉದ್ಘಾಟಿಸಿ ಮನದ ಭಾವಕ್ಕೆ ರೇಖೆ ಹಾಗೂ ಬಣ್ಣದ ಮೂಲಕ ಜೀವ ತುಂಬುವ ಇಂತಹ ಚಿತ್ರಕಲಾ ತರಗತಿಗಳು ಯಶಸ್ವಿಯಾಗಲೆಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕಿ ನಿಕ್ಷಿತಾ ಮರಿಕೆ, ಯುವ ಉದ್ಯಮಿ ಲಕ್ಷೀಗಣೇಶ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು. ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ರಮೇಶ್ ಪ್ರಭು ಸಂಪ್ಯ ಪ್ರಸ್ತಾವಿಕ ಮಾತುಗಳನ್ನಾಡಿ ಶುಭ ಹಾರೈಸಿದರು .ಶ್ರೀಮತಿ ಭವ್ಯ ಮರಿಕೆ ಕಾರ್ಯಕ್ರಮ ನಿರೂಪಿಸಿದರು .












