






ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಕಿಂಡರ್ ಗಾರ್ಟನ್ ಪದವಿ ಪ್ರದಾನ ಸಮಾರಂಭಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಟನ್ ಇಲ್ಲಿನ ಯುಕೆಜಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಇತ್ತಿಚೆಗೆ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಪೀರಿಯರ್, ಬೆಥನಿ ಕಾನ್ವೆಂಟ್ ಇಚಿಲಂಪಾಡಿ ಇದರ ಸಿಸ್ಟರ್ ಡಾ.ಕಿರಣ್, ಎಲ್.ಕೆ.ಜಿ ಹಾಗೂ ಯು.ಕೆ.ಜಿ ಪ್ರಾಥಮಿಕ ಶಿಕ್ಷಣದ ಬುನಾದಿಯಿದ್ದಂತೆ.ಮಕ್ಕಳು ಇಲ್ಲಿ ಆಟದೊಂದಿಗೆ ಪಾಠವನ್ನು ಕಲಿಯುತ್ತಾರೆ.ಶಿಕ್ಷಕರು ಶಾಲೆಯಲ್ಲಿ ಎರಡನೇ ತಾಯಿಯಂತೆ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಾರೆ.ಆದ್ದರಿಂದ ಮಕ್ಕಳಿಗೆ ಮನೆಯ ಪ್ರೀತಿಯ ವಾತಾವರಣ ಶಾಲೆಯಲ್ಲೂ ಸಿಗುತ್ತದೆ ಮತ್ತು ಎಲ್ಲಾ ಹೆತ್ತವರು ಶಿಕ್ಷಕರನ್ನು ಗೌರವಿಸಬೇಕೆಂದು ಪಾಲಕರಿಗೆ ಕಿವಿ ಮಾತು ಹೇಳಿದರು.




ಅತಿಥಿಯಾಗಿ ಆಗಮಿಸಿದ್ದ ,ಮಾನಸಿಕ, ಆಧ್ಯಾತ್ಮಿಕ , ಕುಟುಂಬ ಮತ್ತು ವೈಯಕ್ತಿಕ ಮಾರ್ಗದರ್ಶಿ ರೆ.ಫಾ .ಡಾ. ಜೋಯ್ ಸೆಬಾಸ್ಟಿಯನ್ CMF ಮಕ್ಕಳ ಜೊತೆ ಬೆರೆತು ಕಥೆಗಳ ಮೂಲಕ ತಮ್ಮ ಮಾತು ಆರಂಭಿಸಿ ಹೆತ್ತವರು,ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾವಲುಗಾರರಂತೆ ಕೆಲಸ ಮಾಡುತ್ತಾರೆ.ಈ ಕಾವಲು ಎಲ್ಲಾ ವಿದ್ಯಾರ್ಥಿಗಳಿಗೆ ಅತೀ ಅಗತ್ಯ ಎಂದು ಹೇಳಿ ಯುಕೆಜಿಯ ಎಲ್ಲಾ ಪುಟಾಣಿಗಳಿಗೆ ಶುಭವನ್ನು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್ ಪ್ರತೀ ವ್ಯಕ್ತಿಯ ಯಶಸ್ಸಿನ ಹಿಂದೆ ಆತನ ಬಾಲ್ಯ ಮಹತ್ವದ ಪಾತ್ರ ವಹಿಸುತ್ತದೆ.ಶಿಕ್ಷಕರು ಬಾಲ್ಯದಲ್ಲಿ ತಿದ್ದಿ ತೀಡಿದ್ದರಿಂದ ಇಂದು ಉತ್ತಮ ಸ್ಥಾನದಲ್ಲಿ ಇರಲು ಸಾಧ್ಯವಾಗಿದೆ ಎಂದು ತಮ್ಮ ಬಾಲ್ಯದ ಶಿಕ್ಷಕರನ್ನು ನೆನಪಿಸಿಕೊಂಡು ಎಲ್ಲಾ ಪುಟಾಣಿಗಳಿಗೆ ಶುಭವನ್ನು ಹಾರೈಸಿದರು.
ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇದರ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕಿರಣ್ ಪುತ್ತಿಲ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯ ಮಾತುಗಳನ್ನಾಡಿದರು.ಬಳಿಕ ಯುಕೆಜಿಯಿಂದ ಒಂದನೇ ತರಗತಿಗೆ ಪದೋನ್ನತಿಗೊಂಡಿರುವ ಪುಟಾಣಿಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ಶಾಲು ಹೊದಿಸಿ ಅಭಿನಂದಿಸಲಾಯಿತು.
ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಗುರು ಶ್ರೀಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲಕ ಪೋಷಕ ಬಂಧುಗಳು,ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಿಂಡರ್ ಗಾರ್ಟನ್ ಮುಖ್ಯಸ್ಥೆ ಶ್ರೀಮತಿ ವಿನೀತಾ ತಂಗಚ್ಚನ್ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು.ಶಿಕ್ಷಕಿ ಸಜಿನಿ ಕಾರ್ಯಕ್ರಮ ನಿರೂಪಿಸಿದರು.









