ಬಾಕಿ ಇರುವ ಬೆಳೆ ವಿಮಾ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಿ

0

ತೋಟಗಾರಿಕಾ ಸಚಿವರಿಗೆ ಅಶೋಕ್ ಕುಮಾರ್ ರೈ ಮನವಿ

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ಪಾವತಿಸಲು ಬಾಕಿ ಇರುವ ಜಿಲ್ಲೆಯ ವಿವಿಧ ತಾಲೂಕುಗಳ ಕೃಷಿಕರಿಗೆ ವಿಮಾ ಮೊತ್ತವನ್ನು ತಕ್ಷಣ ಪಾವತಿ ಮಾಡುವಂತೆ ರಾಜ್ಯ ತೋಟಗಾರಿಕಾ ಸಚಿವ ಮಲ್ಲಿಕಾರ್ಜುನ ಎಸ್ ಎಸ್ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದ್ದಾರೆ.


ಗುರುವಾರ ಸಚಿವರನ್ನು ಭೇಟಿ ಮಾಡಿದ ಶಾಸಕರು ದ ಕ ಜಿಲ್ಲೆಯ ಹಲವು ಕಡೆಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ.ರೈತರಿಗೆ ಪರಿಹಾರವಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ನೀಡಬೇಕಾದ ವಿಮಾ ಮೊತ್ತ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಇನ್ನೂ ಪಾವತಿಯಾಗಿಲ್ಲ. ಈಗಾಗಲೇ ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ಅಽಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದಿರುವ ಶಾಸಕರು ಬಾಕಿ ಇರುವ ಮೊತ್ತವನ್ನು ತಕ್ಷಣ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.


ಬಾಕಿ ಇರುವ ಗ್ರಾಮಗಳು
ಪುತ್ತೂರು ತಾಲೂಕಿನ ಬಲ್ನಾಡು, ಬಂಟ್ವಾಳ ತಾಲೂಕು ವ್ಯಾಪ್ತಿಯ ವಿಟ್ಲ, ನರಿಕೊಂಬು, ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಕೊಕ್ಕಡ ಹಾಗೂ ಅರಸಿನಮಕ್ಕಿ, ಕಡಬ ತಾಲೂಕಿನ ಗೋಳಿತೊಟ್ಟು, ಕಡಬ, ಕೌಕ್ರಾಡಿ, ನೆಲ್ಯಾಡಿ, , ಮಂಗಳೂರು ತಾಲೂಕಿನ ಮೂಡುಶೆಡ್ಡೆ, ಸುಳ್ಯ ತಾಲೂಕಿನ ಅಮರಮುಡ್ನೂರು, ಉಬರಡ್ಕ, ಮಿತ್ತೂರು, ಅಲೆಟ್ಟಿ ಹಾಗೂ ಅರಂತೋಡು ಗ್ರಾಮಗಳ ಕೃಷಿಕರ ವಿಮಾ ಮೊತ್ತ ಪಾವತಿಯಾಗಲು ಬಾಕಿ ಇದೆ. ಈ ಪಟ್ಟಿಯನ್ನು ಸಚಿವರಿಗೆ ಹಾಗೂ ಸಂಬಂಽಸಿದ ಅಽಕಾರಿಗಳಿಗೆ ಶಾಸಕರು ನೀಡಿದ್ದಾರೆ.

ಹವಾಮಾನ ಆಧಾರಿತ ಬೆಳೆ ವಿಮಾ ಪರಿಹಾರ ಮೊತ್ತ ವಿತರಣೆಯಲ್ಲಿ ಪ್ರಾರಂಭದಲ್ಲಿ ಲೋಪವಾಗಿತ್ತು ಈ ಬಗ್ಗೆ ಸದನದಲ್ಲಿ ಸರಕಾರದ ಗಮನಸೆಳೆದು ಆ ಬಳಿಕ ಅಧಿಕಾರಿಗಳ ಸಭೆ ಕರೆದು ಬಹುತೇಕ ಕೃಷಿಕರಿಗೆ ವಿಮಾ ಪರಿಹಾರ ಮೊತ್ತವನ್ನು ಒದಗಿಸಲಾಗಿದೆ. ಕೆಲವು ಗ್ರಾಮಗಳು ಇನ್ನೂ ಬಾಕಿ ಇದೆ. ದಕ ಜಿಲ್ಲೆಯ ಯಾವ ಗ್ರಾಮಗಳ ಕೃಷಿಕರಿಗೆ ವಿಮಾ ಮೊತ್ತ ನೀಡಲು ಬಾಕಿ ಇದೆ ಆ ಗ್ರಾಮಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇನೆ. ಶೀಘ್ರವೇ ಬಾಕಿ ಇರುವ ಎಲ್ಲಾ ಗ್ರಾಮಗಳ ವಿಮಾ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ ಎಂಬ ಪೂರ್ಣ ವಿಶ್ವಾಸವಿದೆ. ಮನವಿ ಮಾಡಿದ ತಕ್ಷಣ ಸೂಕ್ತ ಕ್ರಮಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ರೈತರಿಗೆ ತೊಂದರೆಯಾದಲ್ಲಿ ಸುಮ್ಮನಿರುವ ಪ್ರಶ್ನೆಯೇ ಇಲ್ಲ, ರೈತರ ಪರವಾಗಿ ಸದನದ ಒಳಗೆ, ಹೊರಗೆ ನ್ಯಾಯಯುತ ಹೋರಾಟ ಮಾಡಿಯೇ ಮಾಡುತ್ತೇನೆ.
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here