ಉಪ್ಪಿನಂಗಡಿ: ದ್ವಿಚಕ್ರ ವಾಹನ-ಕಾರು ಡಿಕ್ಕಿ -ಮಗು ಮೃತ್ಯು,ಇಬ್ಬರಿಗೆ ಗಾಯ

0

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದು ಐದುವರೆ ವರ್ಷ ಪ್ರಾಯದ ಸುಹೈರಾ ಸಾವನ್ನಪ್ಪಿ ಇತರ ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

ತಣ್ಣಿರುಪಂತ ಗ್ರಾಮದ  ಕೊಡಂಗೆ ಮನೆ ನಿವಾಸಿ ಇಸ್ಮಾಯಿಲ್ ಎಂಬವರು ತನ್ನ ಮಗಳು ಸಾಜಿರಾ ಮತ್ತಾಕೆಯ ಮಗಳು  ಸುಹೈರಾ ಳನ್ನು ಕುಳ್ಳಿರಿಸಿಕೊಂಡು ಕಲ್ಲೇರಿಯಿಂದ ಕುಪ್ಪೆಟ್ಟೀಗೆ ಪ್ರಯಾಣಿಸುತ್ತಿದ್ದಾಗ  ಎದುರುಗಡೆಯಿಂದ ಬಂದ  ವೇಣೂರು  ಮೂಲದ ಶಿವಪ್ರಸಾದ್ ಎಂಬವರು ಚಲಾಯಿಸಿಕೊಂಡಿದ್ದ ಕಾರು ಡಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಸುಹೈರಾ ಮತ್ತಾಕೆಯ ತಾಯಿ ಸಾಜಿರಾ (33) , ದ್ವಿಚಕ್ರ ವಾಹನ ಸವಾರ ಬಾಲಕಿಯ ಅಜ್ಜ  ಇಸ್ಮಾಯಿಲ್  (60) ಎಂಬವರು ಗಾಯಗೊಂಡು ಆಸ್ಪತ್ರೆಗೆ  ದಾಖಲಿಸಲ್ಪಟ್ಟಿದ್ದರು.

ಈ ಪೈಕಿ  ಗಂಭೀರವಾಗಿ ಗಾಯಗೊಂಡ ಸುಹೈರಾ  ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ವೇಳೆ ಸಾವನ್ನಪ್ಪಿದ್ದಾಳೆಂದು ಪೊಲೀಸ್ ಮೂಲಗಳು ತಿಳಿಸಿದೆ. 

ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

LEAVE A REPLY

Please enter your comment!
Please enter your name here