







ಗುರುವಾಯನಕೆರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುವಾಯನಕೆರೆ ಇಲ್ಲಿಯ ಮುಖ್ಯ ಶಿಕ್ಷಕರಾದ ಉಮಾ ಡಿ. ಗೌಡ ಹಟ್ಟತ್ತೋಡಿ ಇವರಿಗೆ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಸಂಘ (ರಿ.), ದಕ್ಷಿಣ ಕನ್ನಡ ವತಿಯಿಂದ ಬೋಧಕರ ವಿಭಾಗದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಜಿಲ್ಲಾಮಟ್ಟದ “ವಿದ್ಯಾರತ್ನ” ಪ್ರಶಸ್ತಿ ದೊರೆತಿದೆ. ಇವರು ಪುಂಜಾಲಕಟ್ಟೆ ಹಟ್ಟತ್ತೋಡಿ ನಿವೃತ್ತ ಶಿಕ್ಷಕ ಧರ್ಣಪ್ಪ ಗೌಡರವÀರ ಪತ್ನಿ. ಇವರು ಮೂಲತಃ ಪುತ್ತೂರು ಕೈಕಂಬ ನಡುತೋಟ ಕುಟುಂಬದವರು. ಇವರ ಕುಟುಂಬದಲ್ಲಿ 11 ಮಂದಿ ಶಿಕ್ಷಕ ವೃತ್ತಿಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.












