ಕುಂತೂರು: ಕಿಸ್ಮತ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಫ್ತಾರ್ ಸ್ನೇಹಕೂಟ, ಸನ್ಮಾನ

0

ಕಡಬ: ಕಿಸ್ಮತ್ ಫ್ರೆಂಡ್ಸ್ ಕ್ಲಬ್ ಕುಂತೂರು ಇದರ ವತಿಯಿಂದ 5ನೇ ವರ್ಷದ ಇಫ್ತಾರ್ ಸ್ನೇಹಕೂಟ ಹಾಗೂ ಸನ್ಮಾನ ಕಾರ್ಯಕ್ರಮ ಮಾ.18ರಂದು ಸಂಜೆ ಕುಂತೂರು ಎ ಮತ್ತು ಬಿ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಮಸೀದಿ ಖತೀಬ್ ಹಾಜಿ ಮೊಯಿದು ಫೈಝಿ ಉಸ್ತಾದ್ ದುವಾ ಆಶೀರ್ವಚನ ನೀಡಿದರು.

ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೌಲಾನ ಅನೀಸ್ ಕೌಸರಿ ಅವರು ಮಾತನಾಡಿ, ಕಿಸ್ಮತ್ ಫ್ರೆಂಡ್ಸ್ ಕ್ಲಬ್ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸಲಿ ಎಂದು ಹಾರೈಸಿದರು.ಎನ್‌ಎಸ್‌ಯುಐ ಉಳ್ಳಾಲ ವಿಧಾನಸಭಾ ಘಟಕದ ಕಾರ್ಯದರ್ಶಿ ಯು.ಟಿ. ಫರೀದ್ ಅವರು ಮಾತನಾಡಿ, ಈ ತಂಡವು ಹತ್ತೂರಿಗೂ ಪರಿಚಿತವಾಗುವ ಶಕ್ತಿಶಾಲಿ ಸಂಘಟನೆಯಾಗಿ ಬೆಳೆಯಲಿ ಎಂದರು. ಚಿತ್ರಸಂತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಶೀರ್ ಕುಂತೂರು ಅವರಿಗೆ ವಿಶೇಷ ಸನ್ಮಾನ ನೆರವೇರಿಸಲಾಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಕಾರ್ಯದರ್ಶಿ ನೌಷದ್ ಮಾಲಾರ್, ಕುಂತೂರು ಎ ಮತ್ತು ಬಿ ಜುಮಾ ಮಸೀದಿ ಅಧ್ಯಕ್ಷ ಅನೀಸ್ ನೂಜಿಲ್, ಮಾಜಿ ಅಧ್ಯಕ್ಷ ಹಾಜಿ ಹಸೈನಾರ್ ಚಾಲ್ಕರೆ, ಅಬ್ಬಾಸ್ ಕುಂತೂರು, ಅಬ್ದುಲ್ಲ ಮುಡಿಪುನಡ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಿಸ್ಮತ್ ಫ್ರೆಂಡ್ಸ್ ಕ್ಲಬ್‌ನ ಪದಾಧಿಕಾರಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here