






ಪುತ್ತೂರು : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ನಡೆದ ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ವಿವಿಧ ವಿಷಯಗಳ ಒಲಿಂಪಿಯಾಡ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.


ಗಮನಾರ್ಹ ಸಾಧನೆಗಳು
2ನೇ ತರಗತಿಯ ವಿದ್ಯಾರ್ಥಿನಿ ಜನಿತಾ ಸಿ ಅವರು ಕಂಪ್ಯೂಟರ್ ಒಲಿಂಪಿಯಾಡ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 4ನೇ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ 1ನೇ ಸ್ಥಾನ ಪಡೆದು ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿ ಹಸ್ಮಿತಾ ಶೆಟ್ಟಿ ಅವರು ಗಣಿತ ಒಲಿಂಪಿಯಾಡ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 8ನೇ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ 1ನೇ ಸ್ಥಾನ ಪಡೆದು ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.



ಎಕ್ಸಲೆನ್ಸ್ ಅವಾರ್ಡ್ ಪಡೆದ ವಿದ್ಯಾರ್ಥಿಗಳು:
ಅವಿ ಅಶ್ವಿನ್ ಶೆಟ್ಟಿ (2ನೇ ತರಗತಿ) – ಗಣಿತ ಒಲಿಂಪಿಯಾಡ್, ತನಯ್ ಡಿ ಕೆ (3ನೇ ತರಗತಿ) – ಇಂಗ್ಲಿಷ್ ಒಲಿಂಪಿಯಾಡ್,ನಿರೀಕ್ಷಾ ವೈ ಆರ್ (4ನೇ ತರಗತಿ) – ವಿಜ್ಞಾನ ಒಲಿಂಪಿಯಾಡ್, ಫಾತಿಮತ್ ಸಾಹಲಾ (5ನೇ ತರಗತಿ) – ಗಣಿತ ಒಲಿಂಪಿಯಾಡ್ ಎಕ್ಸಲೆನ್ಸ್ ಅವಾರ್ಡ್ ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ , ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ , ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಮತ್ತು ಶಿಕ್ಷಕರ ವೃಂದ ಅಭಿನಂದಿಸಿದರು. ಶಿಕ್ಷಕಿ ಲಿಖಿತ ಎಂ. ಎನ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತರಬೇತಿಯನ್ನು ನೀಡಿದ್ದಾರೆ.










