






ಗೌರವಧ್ಯಕ್ಷ ಶಿವರಾಮ ಉಪಾಧ್ಯಾಯ, ಗೌರವ ಸಲಹೆಗಾರ ಚಿದಾನಂದ ಉಪಾಧ್ಯಾಯ, ಅಧ್ಯಕ್ಷ ಸುರೇಶ್ ಗುತ್ತು, ಸಂಚಾಲಕ ಕೇಶವ ಕೆ.ಪಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕಲ್ಪಡ


ಕಾಣಿಯೂರು :ಕೊಡಿಯಾಲ ಕಲ್ಪಡ ಸ್ನೇಹಿತರ ಬಳಗ ಇದರ ದಶ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಶಮಾನೋತ್ಸವ ಸಮಿತಿಯನ್ನು ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು ಹಾಗೂ ಕಾರ್ಯದರ್ಶಿ ಸುಜಿತ್ ಇವರ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು.



ಗೌರವಧ್ಯಕ್ಷರಾಗಿ ಶಿವರಾಮ ಉಪಾಧ್ಯಾಯ, ಗೌರವ ಸಲಹೆಗಾರರಾಗಿ ಚಿದಾನಂದ ಉಪಾಧ್ಯಾಯ, ಅಧ್ಯಕ್ಷರಾಗಿ ಸುರೇಶ್ ಗುತ್ತು, ಸಂಚಾಲಕರಾಗಿ ಕೇಶವ ಕೆ.ಪಿ ಕಲ್ಪಡ ತೋಟ, ಸಹ ಸಂಚಾಲಕರಾಗಿ ಯುವರಾಜ್ ಕಲ್ಪಡ, ಉಪಾಧ್ಯಕ್ಷರಾಗಿ ಗಿರೀಶ್ ಕಲ್ಪಡ, ಪ್ರಧಾನ ಕಾರ್ಯದರ್ಶಿ ಯಾಗಿ ಬಾಲಕೃಷ್ಣ ಕಲ್ಪಡ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಕೆ. ವಿ , ಸಂಘಟನಾ ಕಾರ್ಯದರ್ಶಿ ಯಾಗಿ ಧರ್ಮಪಾಲ ಕಲ್ಪಡ ಹಾಗೂ ಬಳಗದ ವಿವಿಧ ಸದಸ್ಯರನ್ನು ವಿವಿಧ ಸಮಿತಿಗಳಿಗೆ ಸಂಚಾಲಕರಾಗಿ ನೇಮಕ ಮಾಡಲಾಯಿತು.










