ಕಾಯ್ಮಣ ಸಜಂಕು ನೂತನ ‘ಮಂದಾರ’ ನಿವಾಸದಲ್ಲಿ ಭಾರತ ಮಾತಾ ಪೂಜನ ಕಾರ್ಯಕ್ರಮ- ಸನ್ಮಾನ

0

ಕಾಣಿಯೂರು: ಕಾಯ್ಮಣ ಗ್ರಾಮದ ಸಜಂಕು ನಿವಾಸಿ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಂದರ ಗೌಡ ಮತ್ತು ಅವರ ಮಗ ಪ್ರಗತಿ ಪರ ಕೃಷಿಕ ದೇವಿಪ್ರಸಾದ್ ಗೌಡರು ಹೊಸತಾಗಿ ನಿರ್ಮಿಸಿದ ಮನೆ ‘ಮಂದಾರ’ ಇದರ ಗೃಹಪ್ರವೇಶವನ್ನು ಭಾರತ ಮಾತಾ ಪೂಜನ ಕಾರ್ಯಕ್ರಮದೊಡನೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ನಾ. ಸೀತಾರಾಮ ರು ಮಾತನಾಡಿ ಹಿಂದೂ ಸಮಾಜ ಜಾತಿ ಮತ ಎಲ್ಲಾ ಕಿತ್ತೊಗೆದು ಒಂದಾಗಿ ಬದುಕ ಬೇಕು. ಅದೇ ಹಿಂದೂ ಸಮಾಜದ ಶಕ್ತಿ ಎಂದೂ ಭಾರತ ಮಾತಾ ಪೂಜನ ಕಾರ್ಯಕ್ರಮದ ಹಿನ್ನೆಲೆ, ಉದ್ದೇಶ ತಿಳಿಸಿದರು. ಸುಂದರ ಗೌಡ ಸಜಂಕು ದೀಪ ಪ್ರಜ್ವಲನೆ ಮಾಡಿದರು, ದೇವಿಪ್ರಸಾದ್ ಗೌಡ ಸಜಂಕು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿವಪ್ರಸಾದ್ ಗೌಡ ಸಜಂಕು ಧನ್ಯವಾದ ಸಮರ್ಪಣೆ ಮಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿದರು. ಸಮಾಜದ ಪ್ರಮುಖರಾದ ದಾಮೋದರ ಗೌಡ ಬೊಮ್ಮೋಡಿ, ನಾರಾಯಣ ಮಡಿವಾಳ, ಡೊಂಬಯ್ಯ ನಲಿಕೆ ಕಾಪೆಜಾಲು, ಜಿನ್ನಪ್ಪ ಪರವ ಮರಕ್ಕಡ, ಐತ ಮುಗೇರ ಮರಕ್ಕಡ, ದೂಮಣ್ಣ ಕುಂಬಾರ ಕೊಪ್ಪ ಇವರನ್ನು ಗೌರವಿಸಲಾಯಿತು. ಭಾರತ ಮಾತ ಪೂಜನ ಕಾರ್ಯಕ್ರಮದ ನಂತರ ಮಂದಾರ ಪ್ರತಿಷ್ಠಾಪನಾ ಮೂಲಕ ಸಾಧಕರಾದ ಹರೀಶ್ ಗೌಡ ಕಾಮಂಜೆ, ಕೃಷ್ಣಪ್ಪ ಕುಂಬಾರ ಕೊಪ್ಪ, ಕೊರಗಪ್ಪ ಕುಂಬಾರ ಕೊಪ್ಪ ಇವರನ್ನು ಸನ್ಮಾನ ಮಾಡಲಾಯಿತು.

LEAVE A REPLY

Please enter your comment!
Please enter your name here