







ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಫೀದ ಅವರು 600ರಲ್ಲಿ 595(ಶೇ.99.10) ಅಂಕ ಪಡೆದು ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 6 ಸಬ್ಜೆಕ್ಟ್ ಗಳ ಪೈಕಿ 4ರಲ್ಲಿ 100ಕ್ಕೆ 100 ಅಂಕ ಪಡೆದಿರುವ ಇವರು ಇನ್ನುಳಿದ 2 ಸಬ್ಜೆಕ್ಟ್ ನಲ್ಲಿ 99 ಹಾಗೂ 96 ಅಂಕ ಪಡೆದಿದ್ದಾರೆ.
ಇವರು ನರಿಮೊಗರು ಗ್ರಾಮದ ಮುಕ್ವೆ ನಿವಾಸಿ, ಮುಕ್ವೆ ಸ.ಉ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಕುಂಞಿ ಹಾಗೂ ಜಮೀಳಾ ದಂಪತಿಗಳ ಪುತ್ರಿ.












