ಪುತ್ತೂರು ಬಂಟರ ಭವನದಲ್ಲಿ ಬಂಟರ ಸಂಘದ ಆಶ್ರಯದಲ್ಲಿ ಬಂಟ ಸಮಾಜ ಬಾಂಧವರ ಸೇವಾರ್ಥವಾಗಿ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ

0

ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟ ಸಮಾಜ ಬಾಂಧವರ ಸೇವಾರ್ಥವಾಗಿ ಎ.14 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ತಾಲೂಕು ಬಂಟರ ಸಂಘದಿಂದ ಪ್ರಥಮ ಬಾರಿಗೆ ಬಂಟ ಸಮಾಜ ಬಾಂಧವರ ಸೇವಾರ್ಥವಾಗಿ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಯಿತು.

ಚಿತ್ರ- ನವೀನ್ ರೈ ಪಂಜಳ

ಸೇವಾರ್ಥಿಗಳಿಗೆ ಶಾಲು ಹೊದಿಸಿ, ಗೌರವ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಯಕ್ಷಗಾನ ಬಯಲಾಟದ ಸೇವಾರ್ಥಿಗಳಿಗೆ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಿದರು. ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಯಕ್ಷಗಾನ ಬಯಲಾಟದ ಸಂಚಾಲಕ ದಯಾನಂದ ರೈ ಕೋರ್ಮಂಡ, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು ಉಪಸ್ಥಿತರಿದ್ದರು

ಸತೀಶ್ ರೈ ಕುತ್ಯಾಡಿ ಅವರಿಗೆ `ಚಾವಡಿ ಸಮ್ಮಾನ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಆಗಿರುವ ಖ್ಯಾತ ಕ್ರೀಡಾಪಟು ಸತೀಶ್ ರೈ ಕುತ್ಯಾಡಿ ಅವರಿಗೆ `ಚಾವಡಿ ಸಮ್ಮಾನ’ ನಡೆಯಿತು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಸತೀಶ್ ರೈಯವರ ಬಗ್ಗೆ ಮಾತನಾಡಿ, ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿದ ಸತೀಶ್ ರೈ ಕೃತಜ್ಞತೆ ಸಲ್ಲಿಸಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಭಾಗ್ಯೇಶ್ ರೈ, ಸತೀಶ್ ರೈ ಕುತ್ಯಾಡಿ ಅವರ ಭಾವ ಮಿತ್ರಂಪಾಡಿ ಜಯಕುಮಾರ್ ರೈ ಎಂ. ಆರ್, ಸಹೋದರಿ ಸ್ವರ್ಣಲತಾ ಜೆ.ರೈ ಮಿತ್ರಂಪಾಡಿ, ತಾಲೂಕು ಬಂಟರ ಸಂಘದ ಪದಾಧಿಕಾರಿಗಳು, ಮಾತೃ ಸಂಘದ ನಿರ್ದೇಶಕರುಗಳು ಸಹಿತ ಸಮಾಜ ಭಾಂದವರು ಉಪಸ್ಥಿತರಿದ್ದರು. ಪ್ರತಿಮಾ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ಬಂಟರ ಯಾನೆ ನಾಡವರ ಮಾತೃ ಸಂಘದ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಹಾಗೂ ಯಕ್ಷಗಾನ ಬಯಲಾಟದ ಸಂಚಾಲಕ ದಯಾನಂದ ರೈ ಕೊರ್ಮಂಡ, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ವಿಶೇಷವಾದ ಫಲ ದೊರೆಯುತ್ತದೆ.
ಬಂಟರ ಸಂಘದಿಂದ ಪ್ರಥಮ ಬಾರಿಗೆ ಕಟೀಲು ಮೇಳದ ಯಕ್ಷಗಾನ ಬಯಲಾಟ `ಶ್ರೀ ದೇವಿ ಮಹಾತ್ಮೆ’ಯನ್ನು ಸಮಾಜ ಬಾಂಧವರ ಸೇವಾರ್ಥ ನೆಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಮುಂಬರುವ ವರ್ಷಗಳಲ್ಲಿ ಇದನ್ನು ಮುಂದುವರಿಸುವ ಬಗ್ಗೆ ಯೋಚನೆ ಇದೆ. ಈ ಕಾರ್‍ಯಕ್ರಮದ ಯಶಸ್ಸಿಗೆ ಪೂರ್ಣ ರೀತಿಯ ಸಹಕಾರ. ಶ್ರೀ ದೇವಿಯ ಆಟವನ್ನು ಆಡಿಸುವಲ್ಲಿ ತಲಾ ಒಂದು ಸಾವಿರದಂತೆ ಹಣ ನೀಡಿ, ಸಹಕರಿಸಿದವರಿಗೆ ವಿಶೇಷವಾದ ಫಲ ದೊರೆಯುತ್ತದೆ. ಒಟ್ಟು 250ಕ್ಕೂ ಹೆಚ್ಚು ಮಂದಿ ಸೇವಾರ್ಥಿಗಳಾಗಿ ಸಹಕರಿಸಿದರು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಭಾಗವಹಿಸಿದರು, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಏ.15 ರಂದು ಬೆಳಿಗ್ಗೆ ಕಟೀಲು ಮೇಳದ ದೇವಿಯ ವಿಷು ಪೂಜೆ ನಡೆಯಿತು. ವಿಷು ಪೂಜೆಯನ್ನು ನೋಡುವ ಸೌಭಾಗ್ಯ ದೊರೆತಿರುವ ಕ್ಷಣ ಅಪೂರ್ವವಾದದ್ದು.
– ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಪುತ್ತೂರು

– ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಪುತ್ತೂರು

ಮನ ಮೆಚ್ಚಿದ ಊಟ-ಉಪಹಾರ
ಯಕ್ಷಗಾನ ಕಾರ್‍ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಂಜೆ ಉಪಹಾರ, ರಾತ್ರಿ ಊಟ, ಮಧ್ಯರಾತ್ರಿ ಚಾ-ತಿಂಡಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

LEAVE A REPLY

Please enter your comment!
Please enter your name here