ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ವೃತ್ತಿಪರ ನಿರ್ದೇಶಕರ ಆಯ್ಕೆ

0

ಪುತ್ತೂರು : 2001ರಲ್ಲಿ ಪ್ರಾರಂಭವಾದ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘವು ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸಹಕಾರಿಯ ಸದಸ್ಯರಿಗೆ ನಿರಂತರವಾಗಿ ಗುಣಮಟ್ಟದ ತ್ವರಿತ ಸೇವೆಯನ್ನು ನೀಡುವ ಸಲುವಾಗಿ ಅನುಭವಿ ಹಾಗೂ ಕ್ರಿಯಾಶೀಲ ಆಡಳಿತ ಮಂಡಳಿಯಿದ್ದು ಇದಕ್ಕೆ ಪೂರಕವಾಗಿ ಇಬ್ಬರು ವೃತ್ತಿಪರ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.

 ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 36ವರ್ಷಗಳ ಸೇವಾನುಭವ ಹೊಂದಿರುವ ನಿವೃತ್ತ ಹಿರಿಯ ವ್ಯವಸ್ಥಾಪಕರು, ಸರ್ಟಿಪೈಡ್‌ ಅಸೋಸಿಯೇಟ್‌ ಆಫ್‌ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಬ್ಯಾಂಕರ್ಸ್‌, ಬ್ಯಾಂಕಿಂಗ್‌ ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮಂಗಳೂರಿನ ಪಾಂಡೇಶ್ವರ ನಿವಾಸಿ ಪುಷ್ಪಲತಾ ಎನ್ ಹಾಗೂ ಸುಳ್ಯ ತಾಲೂಕಿನ ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮುಖ್ಯಕಾರ್ಯನಿರ್ವಾಹಕರಾಗಿ ನಿವೃತ್ತರಾಗಿರುವ ಹಾಗೂ ವಿವಿಧ ಸಂಘಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ಸುಳ್ಯದ ಮಂಡೆಕೋಲು ಗ್ರಾಮದ ಚಾಕೋಟೆ ನಿವಾಸಿ ಅನಂತಕೃಷ್ಣ ಬಿ ಅವರು ಸಹಕಾರಿಯ ವೃತ್ತಿಪರ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ.

ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ದರ್ಬೆ, ಎಂ ಎಸ್‌ ರಸ್ತೆ, ಬಿ ಸಿ ರೋಡ್‌, ಮಂಗಳೂರು, ಬೆಳ್ತಂಗಡಿ, ಶಿರ್ವ, ಬೆಳ್ಳಾರೆ, ಕಡಬ, ವಿಟ್ಲ, ವಿರಾಜಪೇಟೆ, ಗುರುಪುರ ಕೈಕಂಬ, ಸುರತ್ಕಲ್‌, ಮಡಂತ್ಯಾರು, ಮುಡಿಪು, ಕಲ್ಲಡ್ಕ ಬೆಂಗಳೂರಿನ ಶೇಷಾದ್ರಿಪುರಂ, ಜಯನಗರ, ಟಿ ದಾಸರಹಳ್ಳಿ ಮತ್ತು ಮಾಚೋಹಳ್ಳಿಯಲ್ಲಿ ಶಾಖೆಗಳನ್ನು ಹೊಂದಿ ಸಹಕಾರಿಯ ಸದಸ್ಯರಿಂದ ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ, ವಿವಿಧ ಉದ್ದೇಶದ ಸಾಲಗಳು, ಜೀವವಿಮೆ‌, ಆರೋಗ್ಯವಿಮೆ ಹಾಗೂ ಸಾಮಾನ್ಯ ವಿಮೆಗಳು, ಪಾನ್ ಕಾರ್ಡ್, ಆಯ್ದ ಶಾಖೆಗಳಲ್ಲಿ ಸೇಫ್‌ ಲಾಕರ್‌ ಮುಂತಾದ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ, ಪ್ರಸ್ತುತ 400 ದಿನಗಳ ಸಾಮಾನ್ಯ ಸದಸ್ಯರ ಠೇವಣಿಗೆ  9.30% ಮತ್ತು ವಿಶೇಷ ಠೇವಣಿಗಳಿಗೆ 9.70% ಬಡ್ಡಿದರ ನೀಡಲಾಗುತ್ತಿದೆ. ನೂತನವಾಗಿ ಮೂರು ಶಾಖೆಗಳನ್ನು ಆರಂಭಿಸಲಾಗುವುದು ಇದರ ಸದುಪಯೋಗವನ್ನು ಪಡೆದುಕೊಂಡು ಸಹಕಾರಿಯ ಪ್ರಗತಿಯಲ್ಲಿ ಕೈ ಜೋಡಿಸುವಂತೆ ಸಹಕಾರಿಯ ಅಧ್ಯಕ್ಷ  ಎಸ್‌ ಆರ್‌ ಸತೀಶ್ಚಂದ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ವಸಂತ ನಾಯಕ್‌ ಎ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here