ಅಕ್ಷಯ ತೃತೀಯ ಪ್ರಯುಕ್ತ ನ್ಯೂ ಮಾನಕ ಜ್ಯುವೆಲ್ಲರ್‌ನಲ್ಲಿ ಭರ್ಜರಿ ಆಫ‌ರ್

0

ಪುತ್ತೂರು: ಅಕ್ಷಯ ತೃತೀಯವು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ್ದು ಎಂಬ ಅರ್ಥ. ಈ ಕಾರಣದಿಂದ ಈ ದಿನ ಬಂಗಾರ ಖರೀದಿಸುವುದು ಸಮೃದ್ಧಿ ಮತ್ತು ಐಶ್ವರ್ಯವನ್ನು ತರಲಿದೆ ಎಂಬ ನಂಬಿಕೆ ಇದೆ. ಬಂಗಾರವು ಸಂಪತ್ತು ಮತ್ತು ಭದ್ರತೆಯ ಸಂಕೇತವಾಗಿದ್ದು, ಈ ದಿನ ಖರೀದಿಸಿದರೆ ದೀರ್ಘಕಾಲದ ಲಾಭ ದೊರೆಯುತ್ತದೆ ಎಂದು ಜನರು ನಂಬುತ್ತಾರೆ. ಆದ್ದರಿಂದ ಅಕ್ಷಯ ತೃತೀಯದಂದು ಬಂಗಾರ ಖರೀದಿಸುವ ಸಂಪ್ರದಾಯ ಬಹಳ ಜನಪ್ರಿಯವಾಗಿದೆ. ಈ ವರ್ಷ ಏಪ್ರಿಲ್ 19ರಂದು ಅಕ್ಷಯ ತೃತೀಯ ಬರುತ್ತಿದ್ದು, ಈ ಶುಭ ದಿನದಂದು ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ, ಪುತ್ತೂರಿನ ಸಿಪಿಸಿ ಪ್ಲಾಝಾ ಮುಂಭಾಗದಲ್ಲಿರುವ ನ್ಯೂ ಮಾನಕ ಜ್ಯುವೆಲ್ಲರ್‌ಗೆ ಭೇಟಿ ನೀಡಿ. ಅಕ್ಷಯ ತೃತೀಯ ಪ್ರಯುಕ್ತ ಇಲ್ಲಿ ಗ್ರಾಹಕರಿಗಾಗಿ ಭರ್ಜರಿ ಆಫರ್‌ಗಳನ್ನು ಘೋಷಿಸಲಾಗಿದೆ.

ಹೊಸ ಹ್ಯಾಂಡ್‌ಮೇಡ್ ಆಭರಣಗಳ ವಿಶಾಲ ಸಂಗ್ರಹ ಲಭ್ಯವಿದ್ದು, 2 ಗ್ರಾಂ ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ವಿಶೇಷ ‘ಗ್ರಾಂಡ್ ಡಿಸ್ಕೊಂಟ್ ನೀಡಲಾಗುತ್ತಿದೆ. ಹಾಗೆಯೇ ಪ್ರತಿ ಕೆಜಿ ಬೆಳ್ಳಿ ಆಭರಣ ಖರೀದಿಗೂ ಆಕರ್ಷಕ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08251238519, 9974270004, 9845324007 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here