ಎರಡು ಕಿಡ್ನಿ ಕಳೆದುಕೊಂಡ ಮಗಳು ; ತಾಯಿಯ ಕಿಡ್ನಿ ಮರುಜೋಡಣೆ : ಬಡಕುಟುಂಬಕ್ಕೆ ಬೇಕಿದೆ ದಾನಿಗಳ ನೆರವಿನ ಹಸ್ತ

0

ಪುತ್ತೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಿಳೆಗೆ ಹಾಗೂ ಕುಟುಂಬಕ್ಕೆ ದಾನಿಗಳ ನೆರವಿನ ಹಸ್ತ ಬೇಕಾಗಿದೆ.

ಪುತ್ತೂರು ತಾಲೂಕಿನ ಚಿಕ್ಕಮೂಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ರಕ್ಷಾ ರೈ ಅವರು ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರು ಈಗ ಪ್ರತಿ ಎರಡು ದಿನಗಳಿಗೊಮ್ಮೆ ಡಯಾಲಿಸಿಸ್ ಅನ್ನು ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ರಕ್ಷಾ ರೈ ಅವರ ತಾಯಿ ತನ್ನ ಮೂತ್ರಪಿಂಡವನ್ನು ದಾನ ಮಾಡಲು ಮುಂದಾಗಿದ್ದು, ಮಗಳಿಗೆ ಜೀವನದಲ್ಲಿ ಎರಡನೇ ಅವಕಾಶವನ್ನು ನೀಡಲು ಸಿದ್ಧರಾಗಿದ್ದಾರೆ. ರಕ್ಷಾ ಅವರ ಚಿಕಿತ್ಸೆಗೆ ಸುಮಾರು 10 ಲಕ್ಷ ರೂಪಾಯಿಯ ಅಗತ್ಯವಿದ್ದು, ತಾಯಿಯ ತ್ಯಾಗ, ಮಗಳ ಹೋರಾಟಕ್ಕೆ ದಾನಿಗಳ ನೆರವಿನ ಹಸ್ತ ಬೇಕಾಗಿದೆ.

ವೀರ ಮಾರುತಿ ಸೇವಾ ಟ್ರಸ್ಟ್ (ರಿ) ರಕ್ಷಾ ರೈ ಮತ್ತು ಅವರ ಕುಟುಂಬವನ್ನು ಬೆಂಬಲಿಸಲು ಮುಂದಾಗಿದ್ದು, ಈ ಕಾರ್ಯಕ್ಕೆ ದಾನಿಗಳ ನೆರವಿನ ಹಸ್ತ ಅಗತ್ಯವಾಗಿದೆ.

LEAVE A REPLY

Please enter your comment!
Please enter your name here