ಸವಣೂರು: ಹಜ್ ಯಾತ್ರೆಗೆ ತೆರಳುತ್ತಿರುವ ಯೂಸುಫ್ ಬಾಯಂಬಾಡಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್ ಶಾಂತಿನಗರ ಸವಣೂರು ಇದರ ಸದಸ್ಯ ಯೂಸುಫ್ ಬಾಯಂಬಾಡಿಯವರಿಗೆ ಸಮಿತಿಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು. ಅನ್ಸಾರುಲ್ ಮುಸ್ಲಿಂ ಯೂತ್ ಫೆಡರೇಶನ್‌ನ ಅಧ್ಯಕ್ಷ ಅಬ್ದುಲ್ ಕರೀಂ ಮೌಲ ಶಾಂತಿನಗರ ಅಧ್ಯಕ್ಷತೆ ವಸಿದ್ದರು. ರಿಫಾಯಿ ದಫ್ ಕಮಿಟಿ ಚಾಪಫಿದರ ಅಧ್ಯಕ್ಷ ಕೆ.ಎಂ ಮೊಹಮ್ಮದ್, ಎಎಂವೈಎಫ್ ಉಪಾಧ್ಯಕ್ಷ ಅಬ್ದುಲ್ ಕರೀಂ ನಡುಬೈಲು, ವರ್ಕಿಂಗ್ ಸದಸ್ಯ ಇಸ್ಮಾಯಿಲ್ ಐಡಿಯಲ್, ಸದಸ್ಯರಾದ ಮಹಮ್ಮದ್ ಕುಂಞಿ ಬಾಬಾ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಮೌಲ ಶಾಂತಿನಗರ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here