ಎಪಿಎಂಸಿ ರಸ್ತೆಯಲ್ಲಿರುವ ಪಿಂಟೋ ಪ್ಲಾಜಾದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

0

ಪುತ್ತೂರು: ಫ್ಯಾಶನ್ ಡಿಸೈನರ್ ಮತ್ತು ರಾಜ್ ಡ್ಯಾನ್ಸ್ ಕ್ರಿಯೇಶನ್ ಸಹಭಾಗಿತ್ವದಲ್ಲಿ 3 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನಡೆಸಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.22ರಂದು ಸಂಜೆ ಎಪಿಎಂಸಿ ರಸ್ತೆಯಲ್ಲಿರುವ ಪಿಂಟೋ ಪ್ಲಾಜಾದಲ್ಲಿ ನಡೆಯಿತು.


ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಇಂತಹ ಶಿಬಿರಗಳಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುತ್ತದೆ, ಜ್ಞಾನ ವೃದ್ಧಿಯ ಜೊತೆಗೆ ಸಂವಹನ ಶಕ್ತಿ ಹೆಚ್ಚಿ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಇದು ಮಕ್ಕಳ ಉತ್ತಮ ಸಾಧನೆಗೆ ತಳಹದಿ ಎಂದರು. ಪುತ್ತೂರು ನಗರ ಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟಿ ಜಗದೀಶ್ ಶೆಟ್ಟಿ, ನಗರ ಸಭೆಯ ಮಾಜಿ ಸದಸ್ಯನವೀನ್ ಚಂದ್ರ ನಾಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹರೀಶ್ ಭಟ್, ಸಮೀರ್ ಪಡೀಲ್, ಸುದರ್ಶನ್ ಭಟ್, ಮುಸೇ ಹಾಜಿ, ಜಯಪ್ರಕಾಶ್, ಆನಂದ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.


ಶಿಬಿರದಲ್ಲಿ ಡ್ರಾಯಿಂಗ್, ಕ್ರಾಫ್ಟ್, ಕ್ಲೇ ಮೊಡೆಲಿಂಗ್, ಡ್ಯಾನ್ಸ್, ಡ್ರಾಮಾ, ಸಂಗೀತ, ಫ್ಯಾಶನ್ ಶೋ, ಪಿಕ್ನಿಕ್, ಕಥೆ, ಸ್ವಿಮ್ಮಿಂಗ್, ಫನ್ನಿ ಗೇಮ್ಸ್ ಇತರ ಆಟೋಟಗಳು ಹೀಗೆ ಕೌಶಲ್ಯಾಧಾರಿತ ಮೌಲ್ಯಯುಕ್ತವಾದ ಚಟುವಟಿಕೆಗಳು ನಡೆಯಿತು. ಅನುಭವಸ್ಥ ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ್ ಮತ್ತು ಶ್ರೀನಿ – ಡ್ಯಾನ್ಸ್ , ಉಲ್ಲಾಸ್ – ಕಥೆ, ಮೌನೇಶ್ ವಿಶ್ವಕರ್ಮ- ನಾಟಕ, ಸ್ವೀಕೃತ್ – ಸ್ವಿಮ್ಮಿಂಗ್ , ದರ್ಶನ್ -ಡ್ರಾಯಿಂಗ್, ಪದ್ಮರಾಜ್ – ಸಂಗೀತ, ಸಮೃದ್ದಿ ಮತ್ತು ಶ್ರಾವ್ಯ – ಫ್ಯಾಶನ್ ಶೋ, ಸಾಥ್ವಿಕ್ ಆರ್.ಸಿ, ದೀಪ್ತಿ, ದರ್ಶನ್ – ಕ್ಲೇ ಮೊಡೆಲಿಂಗ್, ಗೇಮ್ಸ್ ತರಬೇತಿ ನೀಡದರು. ಮಕ್ಕಳಿಂದ ಡ್ಯಾನ್ಸ್ ಮತ್ತು ಫ್ಯಾಷನ್ ಶೋ ನಡೆಯಿತು.ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುವ ಈ ತರಬೇತಿ ಶಿಬಿರವನ್ನು ಫ್ಯಾಶನ್ ಡಿಸೈನರ್ ಸ್ಪಾಟ್‌ನ ಮಾಲಕಿ ಶ್ರಾವ್ಯ ಜಗದೀಶ್ ಶೆಟ್ಟಿ ಆಯೋಜಿಸಿದ್ದರು. ಸುಮಾರು 25 ಮಕ್ಕಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.


ಅಶ್ವಿನಿ ಹೋಟೇಲ್‌ನ ಕೃಷ್ಣ ವೇಣಿ ಕರುಣಾಕರ ರೈ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು, ಸಮೃದ್ದಿ ಜೆ.ಶೆಟ್ಟಿ ಮತ್ತು ಸಾನಿಧ್ಯ ಕೆ. ಭಂಡಾರಿ ಪ್ರಾರ್ಥಿಸಿದರು. ಹರಿಣಾಕ್ಷಿ ಜೆ.ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here