







ಆರೋಗ್ಯ ಸುರಕ್ಷತೆಗಾಗಿ ಆರೋಗ್ಯ ಸಂಜೀವಿನಿ ವಿಮೆ ಜಾರಿ ಶ್ಲಾಘನೀಯ-ಯು. ಟಿ ಖಾದರ್


ಪುತ್ತೂರು:ಆರ್ಯಾಪು ಸಹಕಾರಿ ಸಂಘದವರು ಸದಸ್ಯರ ಅರೋಗ್ಯ ಸುರಕ್ಷಿತೆಗಾಗಿ ಸ್ವತಹ ಅರೋಗ್ಯ ವಿಮೆ ಜ್ಯಾರಿ ತಂದಿರುವುದು ಬಹಳ ಶ್ಲಾಘನೀಯ ಕೆಲಸ. ಜೀವನ ಶೈಲಿ, ಆಹಾರ ಕ್ರಮ, ಜಂಕ್ ಫುಡ್ ಸೇವನೆಯಿಂದಾಗಿ ಜನರ ಅರೋಗ್ಯ ಹಾಳಾಗುತ್ತಿದ್ದು ಇದರಿಂದಾಗಿ ಹೆಚ್ಚಿನ ಜನರು ಬಿ ಪಿ, ಶುಗರ್ ಗಳಿಂದ ಬಳಲುತ್ತಿದ್ದಾರೆ. ಕೆಲವರಿಗೆ ತಮ್ಮ ದೇಹದಲ್ಲಿ ಅತಿಯಾಗಿ ಬಿಪಿ ಶುಗರ್ ಇದೆಯೆಂದೇ ಗೊತ್ತಿರುವುದಿಲ್ಲ. ಯುವ ಪೀಳಿಗೆಯೂ ಈ ಸಮಸ್ಯೆಯಿಂದ ಬಳಲುತ್ತಿದೆ. ಆದುದರಿಂದ ಸಹಕಾರಿ ಸಂಘಗಳು 6 ತಿಂಗಳಿಗೊಮ್ಮೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವುದು ಉತ್ತಮ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಕರೆ ನೀಡಿದರು.



ಅವರು ಮೇ 26 ರಂದು ಆರ್ಯಾಪು ಸಹಕಾರಿ ಸಂಘದ ವತಿಯಿಂದ ಏರ್ಪಡಿಸಲಾದ ಸಹಕಾರಿ ಸಂಜೀವಿನಿ ಅರೋಗ್ಯ ವಿಮೆ ಯೋಜನೆಯ ಉದ್ಘಾಟನೆ ಕಾರ್ಯಕ್ರಮದ ಪ್ರಯುಕ್ತ ಸ್ಪೀಕರ್ ಯು ಟಿ ಖಾದರ್ ರವರಿಗೆ ಭಾಗಿಯಾಗಲು ಅನಾನುಕೂಲವಾಗಿದ್ದು ಮಂಗಳವಾರದಂದು ಆರ್ಯಾಪು ಸಹಕಾರಿ ಸಂಘದ ಕಚೇರಿಯಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜನರು ಸಕ್ಕರೆ ಸೇವಿಸುವುದು ಅರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಾನು ಸಕ್ಕರೆ ಸೇವಿಸುವುದು ಹಲವಾರು ವರ್ಷಗಳಿಂದ ನಿಲ್ಲಿಸಿರುತ್ತೇನೆ. ಹಿಂದೆ ರೇಷನ್ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಸಕ್ಕರೆ ನೀಡುವ ಯೋಜನೆ ಇತ್ತು. ನಾನು ಆಹಾರ ಸಚಿವನಾದ ಕೂಡಲೇ ಸಕ್ಕರೆ ನೀಡುವ ಯೋಜನೆಯನ್ನು ನಿಲ್ಲಿಸಿರುತ್ತೇನೆ. ಹೆಚ್ವಿನ ಜನರ ಕಿಡ್ನಿ ವೈಫಲ್ಯಗೊಳ್ಳುತ್ತಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ದುಬಾರಿ ವೆಚ್ಚ ತಗುಲಿ ಜನ ಸಾಮಾನ್ಯರಿಗೆ ತೊಂದರೆಯಾಗುವುದನ್ನು ಮನಗಂಡ ನಾನು ಅರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದ ಹೆಚ್ಚಿನ ತಾಲೂಕು ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದ ಡಯಾಲಿಸಿಸ್ ಸೆಂಟರ್ ಪ್ರಾರಂಭಿಸಿರುತ್ತೇನೆ. ಹಾಗೆಯೇ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೂ ಕೂಡ ಡಯಾಲಿಸಿಸ್ ಸೆಂಟರ್ ತೆರೆಯಲು ನಾನು ಆ ಸಂದರ್ಭದಲ್ಲಿ ಅನುಮೋದನೆ ನೀಡಿದ ಕಾರಣ ಎಷ್ಟೋ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಆರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಸ್ವಾಗತಿಸಿದರು. ಉಪಾಧ್ಯಕ್ಷ ಸುರೇಂದ್ರ ರೈ ಬಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ, ನಿರ್ದೇಶಕರುಗಳಾದ ಸದಾನಂದ ಶೆಟ್ಟಿ ಕೂರೇಲು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಮೂಲೆ ಆರ್ಯಾಪು, ಶೀನಪ್ಪ ಮರಿಕೆ, ಗಣೇಶ್ ರೈಬಳ್ಳಮಜಲು ಕುರಿಯ, ಸಂಶುದ್ದೀನ್ ನೀರ್ಕಜೆ, ತಿಮ್ಮಪ್ಪ ಜಂಗಮುಗೇರು, ಶ್ರೀಮತಿ ತೆರೆಜ ಸಿಕ್ವೆರಾ ಕೆಮ್ಮಿoಜೆ, ರಂಜಿತ್ ಬಂಗೇರ ಸಂಪ್ಯ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ನಗರಸಭೆಯ ಮಾಜಿ ಸದಸ್ಯ ರಿಯಾಜ್ ಪರ್ಲಡ್ಕ, ಉದ್ಯಮಿ ಶಿವರಾಮ ಆಳ್ವ, ಮಾಜಿ ನಿರ್ದೇಶಕ ಜಯಪ್ರಕಾಶ್ ರೈ ಬಳ್ಳಮಜಲು, ಮಾಜಿ ಪಂಚಾಯತ್ ಸದಸ್ಯ ಪವಿತ್ರ ರೈ, ಜಬ್ಬಾರ್ ಸಂಪ್ಯ. ಬೂತ್ ಅಧ್ಯಕ್ಷ ನಾಸಿರ್ ಸಂಪ್ಯ, ಕೊಂಕಣಿ ಅಕಾಡಮಿ ಮಾಜಿ ಸದಸ್ಯ ದಾಮೋದರ ಭಂಡಾರ್ಕರ್. ಸಂಜಯ್ ನಗರ ಶಾಲೆಯ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಇಬ್ರಾಹಿಂ ಪಿ ಎಂ. ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ. ಎಳ್ನಾಡುಗುತ್ತು. ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನವೀನ್ ರೈ ಕುರಿಯ, ಸಲಾಂ ಸಂಪ್ಯ, ರಫೀಕ್ ಎಂ.ಕೆ ಮುಕ್ರಂಪಾಡಿ, ಸುರೇಂದ್ರ ಮೊಟ್ಟೆತಡ್ಕ. ಬಾಬು ಮರಿಕೆ ಸಹಿತ ಸಹಕಾರಿ ಸಂಘದ ಸದಸ್ಯರು ಭಾಗವಹಿಸಿದ್ದರು.
ಶಾಖಾ ವ್ಯವಸ್ಥಾಪಕಿ ಶ್ರೀಮತಿ ಸುಭಾಷಿನಿ, ಸಿಬ್ಬಂದಿಗಳಾದ ಉಮೇಶ್ ಎಸ್ ಕೆ,ಅರ್ಜುನ್ ಭಾಸ್ಕರ್, ವಿನಯಕುಮಾರ್ ರೈ. ನವೋದಯ ಪ್ರೇರಕಿ ಶ್ರೀಮತಿ ಮೋಹಿನಿ ಕಾರ್ಯಕ್ರಮಕ್ಕೆ ಸಹಕರಿಸಿದರು.










