







ಅಧ್ಯಕ್ಷ: ರತನ್ ರೈ ಕುಂಬ್ರ, ಪ್ರ.ಕಾರ್ಯದರ್ಶಿ: ರಾಜ್ ಪ್ರಕಾಶ್ ರೈ, ಕೋಶಾಧಿಕಾರಿ: ಅಂಕಿತ್ ರೈ, ಉಪಾಧ್ಯಕ್ಷ: ಜಗನ್ನಾಥ ಪೂಜಾರಿ, ಉಪಾಧ್ಯಕ್ಷ: ಸದಾಶಿವ ನಾಯ್ಕ, ಜೊತೆ ಕಾರ್ಯದರ್ಶಿ: ಉದಯ ಮಡಿವಾಳ, ಗೌರವ ಲೆಕ್ಕ ಪರಿಶೋಧಕ: ಶೇಖರ ರೈ


ಪುತ್ತೂರು: ಒಳಮೊಗ್ರು ಗ್ರಾಮದ ರಾಮಗಿರಿ ಕುಂಬ್ರದ ಶ್ರೀ ರಾಮ ಭಜನಾ ಮಂದಿರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಮಂದಿರದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಮೋನಪ್ಪ ಪೂಜಾರಿ ಬಡೆಕ್ಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಉಪಾಧ್ಯಕ್ಷ ರತನ್ ರೈ ಕುಂಬ್ರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮುಗೇರು ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ರಾಜ್ ಪ್ರಕಾಶ್ ರೈ ಕುಂಬ್ರ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ನಂತರ ನಡೆದ ಸಭೆಯಲ್ಲಿ 2025-26ನೇ ಸಾಲಿಗೆ ಮಂದಿರದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಉಮೇಶ್ ಕುಮಾರ್ ಬರೆಮೇಲು ಜವಾಬ್ದಾರಿಯನ್ನು ನಿರ್ವಹಿಸಿದರು.



ಅಧ್ಯಕ್ಷರಾಗಿ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿಯಾಗಿ ರಾಜ್ ಪ್ರಕಾಶ್ ರೈ ಕುಂಬ್ರ, ಕೋಶಾಧಿಕಾರಿಯಾಗಿ ಅಂಕಿತ್ ರೈ ಕುಯ್ಯಾರು, ಉಪಾಧ್ಯಕ್ಷರುಗಳಾಗಿ ಜಗನ್ನಾಥ ಪೂಜಾರಿ ಮುಡಾಲ ಮತ್ತು ಸದಾಶಿವ ನಾಯ್ಕ ಶೇಖಮಲೆ, ಜೊತೆ ಕಾರ್ಯದರ್ಶಿಯಾಗಿ ಉದಯ ಮಡಿವಾಳ ಕುಂಬ್ರ, ಗೌರವ ಲೆಕ್ಕ ಪರಿಶೋಧಕರಾಗಿ ಶೇಖರ ರೈ ಕುರಿಕ್ಕಾರರವರುಗಳನ್ನು ಆಯ್ಕೆ ಮಾಡಲಾಯಿತು.
ವಿವಿಧ ಕಾರ್ಯಕ್ರಮಗಳ ಸಂಚಾಲಕರುಗಳಾಗಿ ವಾರದ ಭಜನೆಗೆ ಅಶೋಕ ಪೂಜಾರಿ ಬಡೆಕ್ಕೋಡಿ, ಶ್ರೀ ಕೃಷ್ಣ ಜನ್ಮಾಷ್ಟಮಿಗೆ ನಿತೀಶ್ ಕುಮಾರ್ ಶಾಂತಿವನ, ಸಾರ್ವಜನಿಕ ಗಣೇಶೋತ್ಸವಕ್ಕೆ ಹರೀಶ್ ರೈ ಮುಗೇರು, ಆಯುಧ ಪೂಜೆಗೆ ಮೋನಪ್ಪ ಪೂಜಾರಿ ಬಡೆಕ್ಕೋಡಿ, ಕನ್ಯಾ ಸಂಕ್ರಮಣಕ್ಕೆ ಪ್ರದೀಪ್ ಶಾಂತಿವನ, ಯಕ್ಷಗಾನ ಬಯಲಾಟಕ್ಕೆ ಮೇಗಿನಗುತ್ತು ಸಂತೋಷ್ ರೈ ಕುಂಬ್ರ, ಸಾಮೂಹಿಕ ಸತ್ಯನಾರಾಯಣ ಪೂಜೆಗೆ ಅರುಣ್ ರೈ ಬಿಜಳ ಹಾಗೂ ಭಜನಾ ಮಂಗಲೋತ್ಸವಕ್ಕೆ ಪದ್ಮನಾಭ ರೈ ಅರೆಪ್ಪಾಡಿ ಅವರುಗಳನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರತನ್ ರೈ ಕುಂಬ್ರ ಮಾತನಾಡಿ, ಮಂದಿರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಸ್ತ ಸದಸ್ಯರ ಸಹಕಾರವನ್ನು ಕೋರಿದರು. ಪ್ರಧಾನ ಕಾರ್ಯದರ್ಶಿ ರಾಜ್ ಪ್ರಕಾಶ್ ರೈ ಕುಂಬ್ರ ವಂದಿಸಿದರು.
ಸಭೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ಕುಂಬ್ರ ದುರ್ಗಾಪ್ರಸಾದ್ ರೈ, ಗಂಗಾಧರ ರೈ ಕುಯ್ಯಾರು, ಶೇಖರ ರೈ ಕುರಿಕ್ಕಾರ, ದಿವಾಕರ ಶೆಟ್ಟಿ ಮೂಕಾಂಬಿಕಾ, ಸುಂದರ ರೈ ಮಂದಾರ, ಉಮೇಶ ಕುಮಾರ್ ಬರೆಮೇಲು, ಕರುಣಾ ರೈ ಬಿಜಳ, ರಾಜೇಶ್ ರೈ ಪರ್ಪುಂಜ ಮತ್ತು ಪದ್ಮನಾಭ ರೈ ಅರೆಪ್ಪಾಡಿ, ಸಂಘಟನೆಯ ಹಿರಿಯ ಮಾರ್ಗದರ್ಶಕರು ಹಾಗೂ ಮಾಜಿ ಪದಾಧಿಕಾರಿಗಳಾದ ಎಮ್. ಎಸ್. ನಾರಾಯಣ ಶಾಂತಿವನ, ಪುರಂದರ ರೈ ಕುಯ್ಯಾರು, ಆನಂದ ರೈ ಡಿಂಬ್ರಿ, ನೇಮಿರಾಜ ರೈ ಕುರಿಕ್ಕಾರ, ಕೊರಗಪ್ಪ ಪೂಜಾರಿ ಕುರಿಕ್ಕಾರ, ದಿನೇಶ್ ಗೌಡ ಪಂಜಿಗುಡ್ಡೆ, ಮೇಘರಾಜ ರೈ ಮುಡಾಲ, ಶಿರಿನಾ ಉರ್ವ, ಸುಷ್ಮಾ ಸತೀಶ್ ಉರ್ವ, ಪೂವಪ್ಪ ಗೌಡ ಕೊಯಿಲತಡ್ಕ, ದಿಲೀಪ್ ರೈ ಕೊಲ್ಲಾಜೆ ಹಾಗೂ ರಶ್ಮಿ ದಿಲೀಪ್ ರೈ ಕೊಲ್ಲಾಜೆ ಉಪಸ್ಥಿತರಿದ್ದರು.
“ ಹಲವು ವರ್ಷಗಳ ಇತಿಹಾಸವಿರುವ ಕುಂಬ್ರ ಶ್ರೀರಾಮ ಭಜನಾ ಮಂದಿರವನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಳಿಸಿ ಭವ್ಯವಾದ ಮಂದಿರ ನಿರ್ಮಾಣ ಮಾಡುವ ಚಿಂತನೆ ಇದ್ದು ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ಮುಂದಿನ ದಿನಗಳಲ್ಲಿ ಮಂದಿರದ ಸರ್ವ ಕಾರ್ಯಗಳಲ್ಲೂ ದಾನಿಗಳು, ಭಕ್ತಾಧಿಗಳು ಸಂಪೂರ್ಣ ಸಹಕಾರ ನೀಡುವ ಮೂಲಕ ಭವ್ಯವಾದ ಮಂದಿರದ ನಿರ್ಮಾಣಕ್ಕೆ ಕೈಜೋಡಿಸುವಂತೆ ವಿನಂತಿಸುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಇರಲಿ.”
ರತನ್ ರೈ ಕುಂಬ್ರ, ಅಧ್ಯಕ್ಷರು, ಕುಂಬ್ರ ಶ್ರೀರಾಮ ಭಜನಾ ಮಂದಿರ










