






ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈಯವರಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವಂತೆ ಹಾಗೂ ನೂತನ ಸರ್ಕಾರಕ್ಕೆ ಶುಭವಾಗಲೆಂದು ಮುಂಡೂರು ಗ್ರಾಮದ ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಮೇ.30ರಂದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.


ಪ್ರಧಾನ ಅರ್ಚಕ ನಾಗೇಶ ಕುದ್ರೆತ್ತಾಯರು ಪೂಜೆ, ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪದ್ಮಯ್ಯ ನಾಯ್ಕ ಬಂಡಿಕಾನ, ಧನಂಜಯ ಕುಲಾಲ್ ಕಂಪ, ಪದ್ಮಯ್ಯ ಗೌಡ ಗುತ್ತಿನಪಾಲು, ಜಲಜ ಕಂಪ, ಪ್ರಬಂಧಕ ಪ್ರಸಾದ ಬೈಪಾಡಿತ್ತಾಯ, ತಿಮ್ಮಪ್ಪ ಬಂಡಿಕಾನ, ಮೋನಪ್ಪ ಗೌಡ ಮತ್ತು ಪ್ರೇಮ ಗುತ್ತಿನಪಾಲು ಸತೀಶ್ ಪೂಜಾರಿ ಹಿಂದಾರು ಸಹಿತ ಹಲವು ಭಕ್ತರು ಉಪಸ್ಥಿತರಿದ್ದರು.













