ಕುಂಜೂರುಪಂಜ ದ ಕ ಜಿ. ಪ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

0

ಬಡಗನ್ನೂರು: ಕುಂಜೂರು ಪಂಜ ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಜೂ.2 ರಂದು ನಡೆಯಿತು.ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ಬಳಸಿಕೊಂಡು ಜಾಥ ನಡೆಸಲಾಯಿತು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಆರತಿ ಮಾಡಿ, ಹೂ ಹಾಕಿ, ಬೆಲೂನ್ ನೀಡಿ ಸ್ವಾಗತಿಸಲಾಯಿತು.

ಖಾಯಂ ಶಿಕ್ಷಕರಾಗಿ ಕರ್ತವ್ಯ ಹಾಜರಿ:
ಅನುದಾನಿತ ಶಾಲೆಯಾಗಿದ್ದ ಕುಂಜೂರುಪಂಜ ಶಾಲೆ ಸರ್ಕಾರಿ ಶಾಲೆಯಾಗಿ ಮಾರ್ಪಾಡಾಗಿ 4 ವರ್ಷದ ಬಳಿಕ ಖಾಯಂ ಶಿಕ್ಷಕರು ನೇಮಕಗೊಂಡಿದ್ದಾರೆ. ಸಜಂಕಾಡಿ ಶಾಲೆಯ ಮುಖ್ಯ ಶಿಕ್ಷಕಿ ಸುಮಲತಾ ಪಿ.ಕೆ. ಹಾಗೂ ಬನ್ನೂರು ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಮಹಮ್ಮದ್ ಅಶ್ರಫ್ ಕೆ ವರ್ಗಾವಣೆಗೊಂಡು ಕುಂಜೂರು ಪಂಜ ಶಾಲೆಯಲ್ಲಿ ಖಾಯಂ ಮುಖ್ಯ ಶಿಕ್ಷಕರಾಗಿ ಕರ್ತವ್ಯ ಹಾಜರಾಗಿದ್ದಾರೆ.ಹಿರಿಯ ಶಿಕ್ಷಕಿ ಶಶಿಕಲಾ ನೇತೃತ್ವದಲ್ಲಿ ಇವರಿಬ್ಬರಿಗೂ ತಾಂಬೂಲ ನೀಡಿ, ಹೂ ಹಾಕಿ, ಅರಿಶಿನ-ಕುಂಕುಮ ಹಚ್ಚಿ, ಆರತಿ ಬೆಳಗಿ ಪ್ರೀತಿಯಿಂದ ಸ್ವಾಗತಿಸಲಾಯಿತು. ಇದೊಂದು ಅವಿಸ್ಮರಣೀಯ ಸುಸಂದರ್ಭ ಎಂದು ಹಿರಿಯ ಶಿಕ್ಷಕಿ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶರೀಫ್, ಉಪಾಧ್ಯಕ್ಷೆ ಶುಭಲಕ್ಷ್ಮಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂವಪ್ಪ, ಎಸ್‌ಡಿಎಂಸಿ ಸರ್ವ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ಅಶ್ರಫ್ ಕೆ ಶಾಲಾ ಶೈಕ್ಷಣಿಕ ರೂಪರೇಷೆಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರ ನೀಡಿದ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here