






ಪುತ್ತೂರು: ದಿ.ಪ್ರವೀಣ್ ನೆಟ್ಟಾರ್ ಸ್ಮರಣಾರ್ಥವಾಗಿ ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ ಸಹಕಾರದಲ್ಲಿ ನೆಟ್ಟಾರು ಹಿ.ಪ್ರಾ. ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ನಡೆಯಿತು.


ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ವಸಂತ ಗೌಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಆರ್.ಕೆ ಭಟ್ ಕುರುಂಬುಡೇಲು ಆಗಮಿಸಿ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು.




ಶಾಲಾ ಮುಖ್ಯಗುರುಗಳಾದ ನಳಿನಾಕ್ಷಿರವರು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಮುಖರಾದ ಅರುಣ್ ಶಂಕರ ನೆಟ್ಟಾರು, ಶೀನಪ್ಪ ಪೂಜಾರಿ ಕುತ್ಯಾಡಿ, ಶೇಖರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು.ನೂತನ ಪ್ರವೀಣ್ ವಂದಿಸಿದರು. ಶೈಲೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.










