






ನೆಲ್ಯಾಡಿ: ನೋಕಿಪಡಿ ಕ್ರಿಕೆಟರ್ಸ್ ನೆಲ್ಯಾಡಿ ಮತ್ತು ಅಬುಧಾಬಿ, ಸೀನಿಯರ್ ಜೆಸಿಐ, ಸಂತೋಷ್ ಲಾಡ್ ಫೌಂಡೇಶನ್, ಬೆಸ್ಟ್ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಹಾಗೂ ಗಲ್ಫ್ ನೆಲ್ಯಾಡಿ ಫ್ರೆಂಡ್ಸ್ (ಜಿಎನ್ಎಫ್) ಇದರ ಸಹಯೋಗದೊಂದಿಗೆ, ದಿ ಬಿಷಪ್ ಗೀವರ್ಗಿಸ್ ಪೋಲಿ ಕಾರ್ಪಸ್, ದಿ ಅಬ್ರಹಾಂ ಈಶೋ ಮತ್ತು ದಿ ನಾರಾಯಣ ಸಿ ಎ ಸ್ಮರಣಾರ್ಥ, ಅರ್ಹ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಧನ ಸಹಾಯ ವಿತರಣೆ ಕಾರ್ಯಕ್ರಮ ಜೂ.15ರಂದು ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಮಿಲ್ಲೆನಿಯಂ ಸಭಾಂಗಣದಲ್ಲಿ ನಡೆಯಿತು.


ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕರಾದ ಫಾ ನೋಮಿನೋಸ್ ಕುರಿಯಾಕೋಸ್ ಉದ್ಘಾಟಿಸಿದರು. ಅತಿಥಿಗಳಾಗಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಮುಖ್ಯಪಾಧ್ಯಾಯರುಗಳಾದ ರವೀಂದ್ರ ಟಿ, ಆರ್ ವೆಂಕಟ್ರಮಣ, ಜಿ.ಪಂ ಮಾಜಿ ಸದಸ್ಯ ಪಿ ಪಿ ವರ್ಗಿಸ್, ದ.ಕ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ ಕೆ, ಪಿಎಂಶ್ರೀ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮುಖ್ಯ್ಯೊಪಾಧ್ಯಯರಾದ ಶ್ರೀಧರ ಕೆ ಎಸ್, ಉದ್ಯಮಿ ರಫೀಕ್ ಸೀಗಲ್, ಶಿವಣ್ಣ ಪಿ, ಸರಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್ ಕುಮಾರ್, ದಯಾಕರ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಆಯಿಷಾ ಫಾಹಿಮ, ಕರಾಟೆ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಮೊಹಮ್ಮದ್ ಹಿಶಾಮ್ ಹಾಗೂ ನೆಲ್ಯಾಡಿ ಪಡುಬೆಟ್ಟು ಶಾಲೆಯ ಚೈತನ್ಯ, ಕೊಕ್ಕಡ ಶಾಲೆಯ ದೀಕ್ಷಿತ, ಕೋಣಾಲು ಶಾಲೆಯ ನಿಹಾಲ್ ಮತ್ತು ಸಂತ ಜಾರ್ಜ್ ಕಾಲೇಜಿನ ಗೌಸಿಯಾ ಭಾನು ಮೊದಲಾದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಜೆಸಿಐ ಅಧ್ಯಕ್ಷ ಉಲಹಾನ್ನನ್ ಪಿ ಎಂ ವಹಿಸಿದ್ದರು. ನೋಕಿಪಡಿ ಕ್ರಿಕೆಟರ್ಸ್ ಇದರ ಅಧ್ಯಕ್ಷ ನ್ಯಾಯವಾದಿ ಇಸ್ಮಾಯಿಲ್ ಸ್ವಾಗತಿಸಿ ವಂದಿಸಿದರು .ಶಾಕಿರ್ ಹಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.



ಹತ್ತು ವರ್ಷಗಳಿಂದ ಪುಸ್ತಕ ವಿತರಿಸುತ್ತಿದ್ದೇವೆ-ರಫೀಕ್ ಪ್ರಿಯದರ್ಶಿನಿ

ಕಳೆದ ಹತ್ತು ವರ್ಷಗಳಿಂದ, ನಾವು ಜಾತಿ, ಮತ ಅಥವಾ ಧರ್ಮವನ್ನು ನೋಡದೆ ಸಮಾಜದ ಎಲ್ಲಾ ವರ್ಗಗಳ ಅರ್ಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ನೋಟ್ಬುಕ್ಗಳನ್ನು ಕೊಡುತ್ತಾ ಬಂದಿದ್ದು ಈ ವರ್ಷ ಕೂಡ ಸುಮಾರು 335 ವಿದ್ಯಾರ್ಥಿಗಳಿಗೆ ನೋಟ್ ಬುಕ್ಸ್ ನೀಡಿದ್ದೇವೆ. ಮಾತ್ರವಲ್ಲದೇ ಶಾಲಾ ಶುಲ್ಕವನ್ನು ನೀಡುತ್ತಿದ್ದೇವೆ. ಇದಕ್ಕಾಗಿ ಕ್ರಿಕೆಟ್ ಪಂದ್ಯಾಟವನ್ನು ನೆಡೆಸಿ ಪಂದ್ಯಾವಳಿಯಿಂದ ಉಳಿದ ಹಣ, ದಾನಿಗಳಿಂದ ಸಂಗ್ರಹಿಸಿದ ಹಣ, ಸಂಸ್ಥೆಗಳ ಸಹಕಾರ ಮತ್ತು ನಮ್ಮ ಕಾಲೇಜು ಸಹಪಾಠಿಗಳ ವಾಟ್ಸಾಪ್ ಗ್ರೂಪ್ ಮೂಲಕ ಆರ್ಥಿಕ ಬೆಂಬಲ ಪಡೆದು ಕಾರ್ಯಕ್ರಮ ನಡೆಸುತ್ತಿದ್ದೇವೆ. ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಆದರೆ ಆರ್ಥಿಕವಾಗಿ ಸದೃಢರಲ್ಲದ ವಿದ್ಯಾರ್ಥಿಗಳನ್ನು ಗುರುತಿಸುವ ಮತ್ತು ಅವರ ಭವಿಷ್ಯದ ಜೀವನ ವ್ಯರ್ಥವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಾವು ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ನೋಕಿಪಡಿ ಕ್ರಿಕೆಟರ್ಸ್ ಅಬುಧಾಬಿ ಮತ್ತು ನೆಲ್ಯಾಡಿ ಇದರ ಮುಖ್ಯಸ್ಥ ರಫೀಕ್ ಪ್ರಿಯದರ್ಶಿನಿ ತಿಳಿಸಿದರು.










