ನೆಲ್ಲಿಕಟ್ಟೆ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಮಕ್ಕಳಿಗೆ ಪುಸ್ತಕ ವಿತರಣೆ

0

ನೆಲ್ಲಿಕಟ್ಟೆ: ವಜ್ರಮಾತಾ ಮಹಿಳಾ ಘಟಕ ಪುತ್ತೂರು, ಅಸಹಾಯಕರ ಸೇವಾ ಟ್ರಸ್ಟ್(ರಿ) ಪುತ್ತೂರು ವತಿಯಿಂದ ರೋಟರಾಕ್ಟ್ ಕ್ಲಬ್ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಸಹಕಾರದೊಂದಿಗೆ ಸ.ಹಿ.ಪ್ರಾ. ಶಾಲೆ ನೆಲ್ಲಿಕಟ್ಟೆಯಲ್ಲಿ ವನಮಹೋತ್ಸವ ಹಾಗೂ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು

.ವಜ್ರಮಾತಾ ಹಾಗೂ ಟ್ರಸ್ಟಿನ ಅಧ್ಯಕ್ಷೆ ನಯನಾ ರೈ ಮತ್ತು ಪ್ರಗತಿ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ ಅವರು ಗಿಡ ನೆಟ್ಟು ಪುಸ್ತಕಗಳನ್ನು ವಿತರಿಸಿ ವನಮಹೋತ್ಸವದ ಮಹತ್ವದ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಜ್ರಮಾತಾ ಉಪಾಧ್ಯಕ್ಷೆ ಯಮುನಾ, ಜತೆ ಕಾರ್ಯದರ್ಶಿ ವಿದ್ಯಾ ಲಿಂಗಪ್ಪ, ಕೋಶಾಧಿಕಾರಿ ಕವಿತಾ ದಿನಕರ, ವತ್ಸಲಾ ಶೆಟ್ಟಿ, ಪ್ರಫುಲ್ಲ, ಪುಷ್ಪ ಅಶೋಕ್ ಕುಮಾರ್ ರೈ, ಲಿಂಗಪ್ಪ ಗೌಡ, ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷ ರಂಜಿತ್, ZRS ಕವಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿ, ಸಹಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here