ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಯೋಗ ದಿನಾಚರಣೆ – ಸರಳ ಯೋಗಾಭ್ಯಾಸ

0

ಪುತ್ತೂರು: ನಮ್ಮ ದೇಶದ ಆದ್ಯಾತ್ಮಿಕ ಶಕ್ತಿಗೆ ಮಹತ್ವವಿದೆ. ಒಂದೊಮ್ಮೆ ಪಾಶ್ಚಾತ್ಯ ಸಂಸ್ಕೃತಿಯ ಹಿಂದೆ ಹೋದರೂ ಇದೀಗ ಮತ್ತೆ ಇಡಿ ವಿಶ್ವೇ ಭಾರತೀಯ ಆಧ್ಯಾತ್ಮಿಕ ಶಕ್ತಿಯನ್ನು ಅನುಸರಿಸುತ್ತಿದೆ. ಇವತ್ತು ಯೋಗವನ್ನು ವಿಶ್ವದೆಲ್ಲೆಡೆ ಮಾಡುತ್ತಾರೆ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅವರು ಹೇಳಿದರು.


ವಿಶ್ವ ಯೋಗ ದಿನದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯೋಗ ಕೇಂದ್ರ ಪುತ್ತೂರು, ಪ್ರಗತಿ ವಿದ್ಯಾಸಂಸ್ಥೆಗಳು ಕಾಣಿಯೂರು, ಸುದಾನ ವಿದ್ಯಾಸಂಸ್ಥೆ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಗಳು, ಅರಣ್ಯ ಇಲಾಖೆ ಪುತ್ತೂರು, ಮಹಾಬಲ ಲಲಿತ ಕಲಾ ಸಭಾ ಮತ್ತು ಅನಿಕೇತನ ಎಜುಕೇಶನ್ ಟ್ರಸ್ಟ್ ಸಹಕಾರದೊಂದಿಗೆ ಜೂ.21ರಂದು ಬೆಳಿಗ್ಗೆ ಗಂಟೆ 5ಕ್ಕೆ ದೇವಳದ ಸಭಾಭವನದಲ್ಲಿ ನಡೆದ ವಿಶ್ವ ಯೋಗ ದಿನ ಮತ್ತು ಸರಳ ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಬ್ಬ ವ್ಯಕ್ತಿ ಶಿಸ್ತು ಬದ್ದ ಜೀವನ ನಡೆಸಲು ಬೆಳಗ್ಗಿನ ಜಾವ ಬೇಗ ಎದ್ದು ಯೋಗಸಾನ ಮಾಡುವುದು ಉತ್ತಮ. ಇವತ್ತು ಇಡಿ ವಿಶ್ವವೇ ಯೋಗಾಭ್ಯಾಸ ಮಾಡುತಿದೆ ಎಂದ ಅವರು ಶರೀರಕ್ಕೆ ಆಹಾರ ಹೇಗೆ ಮುಖ್ಯವೋ ಯೋಗವೂ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದರು.


ಮಾನವ ಕುಲಕ್ಕೆ ಯೋಗದ ಪ್ರಯೋಜನ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಆರೋಗ್ಯ ಉಳಿಸಿಕೊಳ್ಳಲು ಯೋಗ ಬೇಕೆ ಬೇಕು. ಇದರ ಪ್ರಯೋಜನ ಮಾನವ ಕುಲಕ್ಕೆ ಇದೆ ಎಂದ ಅವರು ದೇವಳದಲ್ಲಿ ನಡೆಯು ಜೀರ್ಣೋದ್ಧಾರ ಕಾರ್ಯಗಳಿಗೆ ಎಲ್ಲರ ಸಹಕಾರ ಯಾಚಿಸಿದರು. ಯೋಗ ಕೇಂದ್ರದ ಗೌರವಾಧ್ಯಕ್ಷ ಜಯಸೂರ್ಯ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗ ಗುರು ಪ್ರಸಾದ್ ಪಾಣಾಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಕೇಂದ್ರದ ಅಧ್ಯಕ್ಷ ಶ್ರೀಗಿರೀಶ್ ಮಳಿ ವಂದಿಸಿದರು. ನ್ಯಾಯವಾದಿ ರಾಜನಾರಾಯಣ ಮಳಿ ಅತಿಥಿಗಳನ್ನು ಪರಿಚಯಿಸಿದರು. ನ್ಯಾಯವಾದಿ ತೇಜಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಗತಿ ಆಂಗ್ಲಮಾಧ್ಯಮ ಶಾಲೆ ಕಾಣಿಯೂರು ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಯೋಗದಲ್ಲಿ ಪಾಲ್ಗೊಂಡರು. ಸರಳ ಯೋಗಾಭ್ಯಾಸದ ಕೊನೆಯಲ್ಲಿ ಪ್ರಗತಿ ಶಾಲೆಯ ವಿದ್ಯಾರ್ಥಿಗಳಿಗೆ ಯೋಗ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here