







ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಶಿಕ್ಷಕ ಜನಾರ್ದನ ಹೇಮಳ ಅವರು ಯೋಗಾಸನ ಕಾರ್ಯಕ್ರಮ ನಡೆಸಿಕೊಟ್ಟರು.


ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದವರು ಯೋಗಾಸನದಲ್ಲಿ ಪಾಲ್ಗೊಂಡರು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್, ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಮುಖ್ಯಗುರು ಶಶಿಕಲಾ, ಎಸ್ ಡಿ ಎಂ ಸಿ ಸದಸ್ಯ ಸುಧಾಕರ್ ಕಾಣಿಯೂರು, ಶಿಕ್ಷಕರಾದ ಗೀತಾ ಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಅವರು ಉಪಸ್ಥಿತರಿದ್ದರು.













