






ನಿಡ್ಪಳ್ಳಿ; ಭಾರತ ಸೇನೆಗೆ ಅಗ್ನಿವೀರನಾಗಿ ಆಯ್ಕೆಯಾದ ಪಾಣಾಜೆ ಗ್ರಾಮದ ಸೂರಂಬೈಲು ವಿಜಿತ್ ಕುಮಾರ್ ರೈಯವರಿಗೆ ಸ್ಕಂದಶ್ರೀ ಯುವಕ ಮಂಡಲ ತೂಂಬಡ್ಕ ಇವರ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜೂ.22 ರಂದು ನಡೆಯಿತು.


ಯುವಕ ಮಂಡಲದ ಅಧ್ಯಕ್ಷ ಮೋಹನ ನಾಯ್ಕತೂಂಬಡ್ಕ, ಕಾರ್ಯದರ್ಶಿ ಸುಜಿತ್ ಕುಮಾರ್, ಕೋಶಾಧಿಕಾರಿ ಐತ್ತಪ್ಪ ನಾಯ್ಕ ತೂಂಬಡ್ಕ ಮತ್ತು ಯುವಕ ಮಂಡಲದ ಸದಸ್ಯರು ಹಾಗೂ ವಿಜಿತ್ ಕುಮಾರ್ ತಾಯಿ ಗೀತಾ ರೈ ಸೂರಂಬೈಲು ಉಪಸ್ಥಿತರಿದ್ದರು.













