






ಪುತ್ತೂರು: ಮುಕ್ಕೂರು ಸಮೀಪದ ಕೋಡಿಬೈಲು ನಿವಾಸಿ ಅವನಿ ಕೆ. ಅವರು ವಿದ್ವತ್ ಅಂತಿಮ ಹಂತದ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಗಳಿಸಿದ್ದಾರೆ.


ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲಾ ವಿಶ್ವವಿದ್ಯಾಲಯ, ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಹಂತದ ಪರೀಕ್ಷೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಅವರ ಮಾರ್ಗದರ್ಶನದಲ್ಲಿ ಅವನಿ ನೃತ್ಯಾಭ್ಯಾಸ ನಡೆಸಿದ್ದಾರೆ.



ಈಗಾಗಲೇ ದೂರದರ್ಶನ ಚಂದನ ವಾಹಿನಿಯ ಸ್ಥಳೀಯ ಶಾಸ್ತ್ರೀಯ ನೃತ್ಯ ವಿಭಾಗದ ಆಡಿಷನ್‌ನಲ್ಲಿ ‘ಬಿ’ ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ಪಡೆದಿದ್ದಾರೆ. ಈಕೆ ಕಾನಾವು ಕೋಡಿಬೈಲು ನಿವಾಸಿ ರಾಮಚಂದ್ರ ಭಟ್ ಮತ್ತು ಅಶ್ವಿನಿ ಕೋಡಿಬೈಲು ದಂಪತಿಯ ಪುತ್ರಿ.










