






ಆಲಂಕಾರು; ಯುವ ಮೋರ್ಚ ಬಿ.ಜೆ.ಪಿ ಸುಳ್ಯಮಂಡಲ ವತಿಯಿಂದ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಯೋಗಭ್ಯಾಸದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿ,ಅಧುನಿಕ ಯುಗದಲ್ಲಿ ಒತ್ತಡದ ಜೀವನ ಶೈಲಿಯಲ್ಲಿ ನಾವೆಲ್ಲರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಇರಬೇಕಾದರೇ ನಿತ್ಯ ಯೋಗಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದರು.


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಂಗಳೂರು ಮಹಾನಗರದ ಸಂಚಾಲಕರಾದ ಆನಂದಕುಂಟಿನಿ ಯವರು ನಿತ್ಯ ಯೋಗಭ್ಯಾಸವನ್ನು ಮಾಡಿದರೆ ನಮಗೆ ಆಗುವ ಪ್ರಯೋಜನದ ಬಗ್ಗೆ ತಿಳಿಸಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಲಂಕಾರಿನಲ್ಲಿ ನಿತ್ಯ ಶಾಖೆಯು ನಡೆಯುತ್ತಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬಹುದು ಎಂದು ತಿಳಿಸಿದರು.



ಆಯುಷ್ ಪಟ್ಟಿಯಂತೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆಲಂಕಾರು ಶಾಖೆಯ ಶಿಕ್ಷಕಿ ಮಲ್ಲಿಕಾರವರು ಯೋಗಭ್ಯಾಸವನ್ನು ನಡೆಸಿಕೊಟ್ಟರು, ಆಲಂಕಾರು ಶಾಖೆಯ ಯೋಗಬಂಧುಗಳು ಪ್ರಾತ್ಯಕ್ಷತೆಯಲ್ಲಿ ಪಾಲ್ಗೊಂಡರು .ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ, ಪೂವಪ್ಪ ನಾಯ್ಕ್ ಎಸ್ ಕಾರ್ಯಕ್ರಮ ನಿರೂಪಿಸಿ,ದಿವಾಕರ ಕುಂಬಾರ ಧನ್ಯವಾದ ಸಮರ್ಪಿಸಿದರು.










